ಶಿವಮೊಗ್ಗ: ಸಾಗರ ಪೇಟೆ ಪೊಲೀಸ್ ಠಾಣೆಯ ಪೊಲೀಸರಿಂದ ಮಿಂಚಿನ ಕಾರ್ಯಚರಣೆ ನಡೆದಿದ್ದು, ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿತನನ್ನು ಪತ್ತೆ ಮಾಡಿ ಆರೋಪಿತನಿಂದ 2,29,900- ರೂ. ಹಣ ವಶಕ್ಕೆ ಪಡೆಯಲಾಗಿದೆ.
ದಿನಾಂಕ: 06/09/2026 ರಂದು ಸಾಗರದ ಅಣಲೆಕೊಪ್ಪದ ನಿವಾಸಿ ಉಮಾ ಅವರು ತಮ್ಮ ಮನೆಯ ಗಾಡ್ರೇಜ್ ನಲ್ಲಿ ಇಟ್ಟಿದ್ದ 2,54,000- ರೂ ನಗದು ಹಣವನ್ನು ತಮ್ಮ ಮನೆಗೆ ಸಣ್ಣ ಪುಟ್ಟ ಕೆಲಸವನ್ನು ಮಾಡಿಕೊಡುತ್ತಿದ್ದ ಪಾಂಡುರಂಗ ಈತನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಸಿಆರ್ ನಂ:175/2026 ಕಲಂ 305, 306 ಬಿಎನ್ ಎಸ್ ರೀತ್ಯ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿನ ಆರೋಪಿ ಮತ್ತು ಕಳುವಾದ ನಗದು ಹಣದ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ. ಅವರ ಮಾರ್ಗದರ್ಶನದಲ್ಲಿ ಸಾಗರ ಉಪವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಬೆನಕಪ್ರಸಾದ್ ಎನ್.ಜೆ. ಅವರ ಮೇಲ್ವಿಚಾರಣೆಯಲ್ಲಿ ತಂಡ ರಚಿಸಿದ್ದರು.
ಸಾಗರ ಪೇಟೆ ಠಾಣೆ ಪೊಲೀಸ್ ನಿರೀಕ್ಷಕ ಪುಲ್ಲಯ್ಯ ರಾಥೋಡ್ ಅವರ ನೇತೃತ್ವದಲ್ಲಿ ಪಿಎಸ್ಐ ಶಾಂತರಾಜ್, ಸಿಬ್ಬಂದಿಗಳಾದ ವಿಶ್ವನಾಥ ಮತ್ತು ನರೇಂದ್ರ ರವರುಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.
ಸದರಿ ಮೇಲ್ಕಂಡ ಪ್ರರಕಣ ದಾಖಲಾಗಿ ಕೆಲವೇ ಗಂಟೆಗಳಲ್ಲಿ ಆರೋಪಿತನಾದ ಪಾಂಡುರಂಗ(35) ವಾಸ ಎಸ್ಎನ್ ನಗರ 3ನೇ ಕ್ರಾಸ್ ಸ್ವಂತ ವಿಳಾಸ ಹಾತ್ ಕಾಂಬಾ ಗ್ರಾಮ ರಾಜಪುರ್ ರತ್ನಗಿರಿ ಜಿಲ್ಲೆ ಮತ್ತು ತಾಲ್ಲೂಕು ಮಹಾರಾಷ್ಟ್ರ ಈತನನ್ನು ಪತ್ತೆಮಾಡಿ ಆರೋಪಿತನಿಂದ 2,29,900 ರೂ. ಹಣವನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ. ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಪ್ರಶಂಶಿಸಿ ಅಭಿನಂದಿಸಿದ್ದಾರೆ.
ಸೂಕ್ಷ್ಮ ನೀರಾವರಿಗೆ ಸಹಾಯಧನ: ಅರ್ಹ ರೈತರಿಂದ ಅರ್ಜಿ ಆಹ್ವಾನ
ಶಿವಮೊಗ್ಗ: 2026-27 ನೇ ಸಾಲಿನ ‘ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ’ಯಡಿ ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ, ‘ಪ್ರತಿ ಹನಿಗೆ ಅಧಿಕ ಬೆಳೆ’ ಕಾರ್ಯಕ್ರಮದ ಮೂಲಕ ಹನಿ ಹಾಗೂ ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಸಹಾಯಧನ ನೀಡಲಾಗುತ್ತಿದೆ.
ಸಹಾಯಧನದ ವಿವರ: 5 ಎಕರೆವರೆಗಿನ ಪ್ರದೇಶಕ್ಕೆ ಶೇಕಡ 90 ರಷ್ಟು ಹಾಗೂ 5 ಎಕರೆ ಮೇಲ್ಪಟ್ಟ ಪ್ರದೇಶಕ್ಕೆ ಶೇಕಡ 45 ರ ದರದಲ್ಲಿ ಗರಿಷ್ಠ 12.50 ಎಕರೆ ಪ್ರದೇಶದವರೆಗೆ ಸಹಾಯಧನ ನೀಡಲಾಗುವುದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಎಲ್ಲಾ ವರ್ಗಗಳ ಆಸಕ್ತ ರೈತರು ಈ ಸೌಲಭ್ಯವನ್ನು ಪಡೆಯಬಹುದು.
ಮರು ಅಳವಡಿಕೆಗೆ ಅವಕಾಶ: ಈಗಾಗಲೇ 7 ವರ್ಷಗಳ ಹಿಂದೆ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಸಹಾಯಧನ ಪಡೆದಿದ್ದು, ಪ್ರಸ್ತುತ ಉಪಕರಣಗಳು ಹಾಳಾಗಿದ್ದರೆ ಅಂತಹ ರೈತರು ಸಹ ಪುನಃ ಸಹಾಯಧನ ಪಡೆಯಲು ಅರ್ಹರಿರುತ್ತಾರೆ.
ಸಹಾಯಧನವನ್ನು ಯೋಜನೆಯ ಮಾರ್ಗಸೂಚಿ, ಅನುದಾನದ ಲಭ್ಯತೆ ಹಾಗೂ ಜೇಷ್ಠತೆಯ ಆಧಾರದ ಮೇಲೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹೋಬಳಿ ಅಥವಾ ತಾಲೂಕು ಮಟ್ಟದ ತೋಟಗಾರಿಕಾ ಕಚೇರಿಯನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

