HomeKarnatakaBIG NEWS: ತಮ್ಮನ ಮೇಲೆ ಕಾರು ಹತ್ತಿಸಿ ಅಣ್ಣನಿಂದಲೇ ಬರ್ಬರ ಹತ್ಯೆ; ಇಬ್ಬರು ಅರೆಸ್ಟ್

BIG NEWS: ತಮ್ಮನ ಮೇಲೆ ಕಾರು ಹತ್ತಿಸಿ ಅಣ್ಣನಿಂದಲೇ ಬರ್ಬರ ಹತ್ಯೆ; ಇಬ್ಬರು ಅರೆಸ್ಟ್

ಶಿವಮೊಗ್ಗ: ಆಸ್ತಿ ವಿಚಾರವಾಗಿ ಅಣ್ಣನೇ ತಮ್ಮನ ಮೇಲೆ ಕಾರು ಹತ್ತಿಸಿ ಬರ್ಬರವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶಿವಮೊಗ್ಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಹೋದರರ ನಡುವೆ ಆರಂಭವಾಗಿದ್ದ ಆಸ್ತಿ ಕಲಹ ತಮ್ಮನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಫೆ.29ರಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಅಣ್ಣ ಇನಾಯತ್ ತನ್ನ ಅಕ್ಕನ ಮಗ ಸಮೀರ್ ಜೊತೆ ಸೇರಿ ತಮ್ಮ ರಫೀಕ್ ಮೇಲೆ ಕಾರು ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಿದ್ದರು.

ಈ ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಪ್ರಕರಣ ಸಂಬಂಧ ಇದೀಗ ಆರೋಪಿಗಳಾದ ಇನಾಯತ್ ಹಾಗೂ ಸಮೀರ್ ನನ್ನು ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular