HomeKarnatakaBIG NEWS: ಶಿವಮೊಗ್ಗ ಲಾಡ್ಜ್ ನಲ್ಲಿ ಉದ್ಯಮಿ ಶವವಾಗಿ ಪತ್ತೆ

BIG NEWS: ಶಿವಮೊಗ್ಗ ಲಾಡ್ಜ್ ನಲ್ಲಿ ಉದ್ಯಮಿ ಶವವಾಗಿ ಪತ್ತೆ

ಶಿವಮೊಗ್ಗ: ಶಿವಮೊಗ್ಗ ನಗರದ ಲಾಡ್ಜ್ ವೊಂದರಲ್ಲಿ ಉದ್ಯಮಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

ಮೃತ ಉದ್ಯಮಿ ಹುಬ್ಬಳ್ಳಿ ಮೂಲದ ಬಸವರಾಜ್ (50) ಎಂದು ಗುರುತಿಸಲಾಗಿದೆ. ಏ. 10ರಂದು ಶಿವಮೊಗ್ಗದ ಲಾಡ್ಜ್ ನಲ್ಲಿ ರೂಂ ಪಡೆದಿದ್ದರು. ಅಂದಿನಿಂದ ಬಸವರಾಜ್ ರೂಮಿನಿಂದ ಹೊರ ಬಂದಿರಲಿಲ್ಲ. ಲಾಡ್ಜ್ ಸಿಬ್ಬಂದಿ ಅನುಮಾನಗೊಂಡು ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸರ ಸಮ್ಮುಖದಲ್ಲಿ ರೂಂ ಬಾಗಿಲು ಒಡೆದು ನೋಡಿದಾಗ ಬಾತ್ ರೂಂ ನಲ್ಲಿ ಬಸವರಾಜ್ ಶವ ಪತ್ತೆಯಾಗಿದೆ. ಬಸವರಾಜ್ ಆಟೋ ಮೊಬೈಲ್ ವ್ಯವಹಾರ ಮಾಡಿತ್ತಿದ್ದರು. ಅದಕ್ಕೂ ಮೊದಲು ಸಿನಿಮಾ ಹಂಚಿಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular