HomeKarnatakaBIG NEWS: ಶಿವಮೊಗ್ಗ- ಚೈನ್ನೈ-ಹೈದರಾಬಾದ್ ಗೆ ನೇರ ವಿಮಾನ ಸೇವೆ: ಅಕ್ಟೋಬರ್ 10 ರಿಂದ ಆರಂಭ

BIG NEWS: ಶಿವಮೊಗ್ಗ- ಚೈನ್ನೈ-ಹೈದರಾಬಾದ್ ಗೆ ನೇರ ವಿಮಾನ ಸೇವೆ: ಅಕ್ಟೋಬರ್ 10 ರಿಂದ ಆರಂಭ

ಶಿವಮೊಗ್ಗ: ಶಿವಮೊಗ್ಗದಿಂದ ಚೆನ್ನೈ ಹಾಗೂ ಹೈದರಾಬದ್ ಗೆ ಸಂಪರ್ಕ ಕಲ್ಪಿಸುವ ಎರಡು ಹೊಸ ನೇರ ವಿಮಾನ ಸೇವೆ ಸ್ಪೈಸ್ ಜೆಟ್ ನಿಂದ ಆರಂಭವಾಗಲಿದೆ.

ಅಕ್ಟೋಬರ್ 10ರಿಂದ ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್ ಗೆ ಸ್ಪೈಸ್ ಜೆಟ್ ವಿಮಾನ ಯಾನ ಆರಂಭವಾಗಲಿದೆ. ಈಗಾಗಲೇ ಸ್ಪೈಸ್ ಜೆಟ್ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

ಈ ಬಗ್ಗೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಕೂದ ಮಾಹಿತಿ ನೀಡಿದ್ದಾರೆ. ಶಿವಮೊಗ್ಗಕ್ಕೆ ಮತ್ತೊಂದು ಮಹತ್ವದ ಸುದ್ದಿ. ಸ್ಪೈಸ್ ಜೆಟ್ ವಿಮನಯಾನ ಸಂಸ್ಥೆಯು ಶಿವಮೊಗ್ಗದಿಂದ ಎರಡು ಹೊಸ ವಿಮನ ಮಾರ್ಗಗಳಲ್ಲಿ ಸೇವೆ ಆರಂಭಿಸಲಿದೆ. ಅಕ್ತೋಬರ್ 10 ರಿಂದ ಚೆನ್ನೈ, ಹಾಗೂ ಹೈದರಾಬಾದ್ ಗೆ ಶಿವಮೊಗ್ಗದಿಂದ ಸೇವೆ ದೊರೆಯಲಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular