HomeEntertainment'ಶಿವಮ್ಮ' ಚಿತ್ರದ ಪ್ರಮೋಷನಲ್ ಫೋಕ್ ಸಾಂಗ್ ರಿಲೀಸ್

‘ಶಿವಮ್ಮ’ ಚಿತ್ರದ ಪ್ರಮೋಷನಲ್ ಫೋಕ್ ಸಾಂಗ್ ರಿಲೀಸ್

ಜೂನ್ 14ಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ಜೈ ಶಂಕರ್ ಆರ್ಯರ್ ನಿರ್ದೇಶನದ ‘ಶಿವಮ್ಮ’ ಚಿತ್ರ ಈಗಾಗಲೇ ತನ್ನ ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆ  ಮಾಡಿಸಿದೆ ಇಂದು ಈ ಸಿನಿಮಾದ ಪ್ರಮೋಷನಲ್ ಹಾಡನ್ನು ರಿಷಬ್ ಫಿಲಂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.  ಈ ಹಾಡಿಗೆ ಸಂಗೀತ ಕಟ್ಟಿ  ಧ್ವನಿಯಾಗಿದ್ದು, ಜೈ ಶಂಕರ್ ಹಾಗೂ ಜಯಲಕ್ಷ್ಮಿ ಪಾಟೀಲ್ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ಮಾಣ ಮಾಡಿದ್ದು, ಶರಣಮ್ಮ ಚಟ್ಟಿ ಸೇರಿದಂತೆ ಚೆನ್ನಮ್ಮ ಅಬ್ಬೇಗೆರೆ, ಶಿವು ಅಬ್ಬೇಗೆರೆ, ಶೃತಿ ಕೊಂಡೆನಹಳ್ಳಿ, ಶಿವಾನಂದ್ ಸದರ್, ತೆರೆ ಹಂಚಿಕೊಂಡಿದ್ದಾರೆ. ಜೈ ಶಂಕರ್ ಆರ್ಯರ್ ಮತ್ತು ಚಂದನ್ ಸಿಎಂ ಅವರ ಸಂಕಲನವಿದೆ. ಹಳ್ಳಿ ಸೊಗಡಿನ ಈ ಸಿನಿಮಾದ ಸಂಪೂರ್ಣ ಶೂಟಿಂಗ್ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಎಂಬ ಹಳ್ಳಿಯಲ್ಲಿ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular