HomeKarnatakaಹಾಸನಾಂಬೆ ಜಾತ್ರೆ ಖರ್ಚು ವೆಚ್ಚ ಕೇಳಿ ದಂಗಾದ ಸಚಿವ ಶಿವಲಿಂಗೌಡ ಹೇಳಿದ್ದೇನು?

ಹಾಸನಾಂಬೆ ಜಾತ್ರೆ ಖರ್ಚು ವೆಚ್ಚ ಕೇಳಿ ದಂಗಾದ ಸಚಿವ ಶಿವಲಿಂಗೌಡ ಹೇಳಿದ್ದೇನು?

ಹಾಸನ: ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಹಾಸನಾಂಬೆ ಉತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು. ಈ ವೇಳೆ ತಯಾರಿ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಹಾಸನಾಂಬೆ ಜಾತ್ರೆ ತಗುಲುವ ಖರ್ಚು, ವೆಚ್ಚದ ಪಟ್ಟಿ ಕೇಳಿ ಸಚಿವರು ದಂಗಾಗಿದ್ದಾರೆ. ಒಂದು ಕಂಟ್ರೋಲ್ ರೂಂ ಸಿದ್ಧತೆಗಾಗಿ 50 ಲಕ್ಷಕ್ಕೆ ಟೆಂಡರ್ ಎಂದು ಅಧಿಕಾರಿಗಳು ಹೇಳಿದ್ದು ಕೇಳಿ ಕಂಗಾಲಾದ ಸಚಿವರು, ಒಂದು ಕಂಟ್ರೋಲ್ ರೂಂಗೆ ಇಷ್ಟು ದುಡ್ಡಾ? ಎಂದು ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

50 ಲಕ್ಷ ಅಂದ್ರೆ ಅರ್ಧ ಕೋಟಿ ರೀ… ಜನ ಏನಂತಾರೆ? ರಾಜ್ಯದಲ್ಲಿ ಬರಗಾಲ ಇದೆ ಜನರು ಏನು ಮಾತನಾಡುತ್ತಾರೆ ಎಂದು ಕೇಳಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ಲತಾಕುಮಾರಿ, ಸರ್ ಹಂಗೆಲ್ಲಾ ಹೇಳ್ಬೇಡಿ, ಬೇಡ ಅಂದ್ರೆ ಡಿಲೀಟ್ ಮಾಡಿಸೋಣ ಎಂದು ತಿಳಿಸಿದ್ದಾರೆ. ಹಂಗಲ್ಲ ಮೇಡಂ, ಒಂದು ಕಂಟ್ರೋಲ್ ರೂಂಗೆ ಇಷ್ಟು ಹಣನಾ? ನನಗೆ ಒಂದೂ ಅರ್ಥ ಆಗ್ತಿಲ್ಲ. ಜಾತ್ರೆ ಚೆನ್ನಾಗಿ ಮಾಡಬೇಕು ಅನ್ನೋದು ನನಗೂ ಸಹ ಇಷ್ಟ. ಆದರೆ ಇಷ್ಟೊಂದು ದುಂದುವೆಚ್ಚಾ ಬೇಕಾ? ಈ ಕರ್ಮದಲ್ಲಿ ನಾನು ಪಾಲುದಾರ ಆಗ್ಬೇಕಾ ಎಂದು ಪ್ರಶ್ನಿಸಿದ್ದಾರೆ. ನಾನು ಆತ್ಮಸಾಕ್ಷಿಗೆ ವಿರುದ್ಧ ನಡೆಯಲ್ಲ, ಆತ್ಮ ಒಪ್ಪದೆ ಹೋದರೆ ಮಾಡಲ್ಲ. ಬೇಕಿದ್ರೆ ಸಿಎಂಗೆ ಹೇಳಿ ವಾಪಸ್ ಹೋಗ್ತಿನಿ ಎಂದು ತಿಳಿಸಿದ್ದಾರೆ.

4 ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 65 ಲಕ್ಷ ಟೆಂಡರ್ ಬಗ್ಗೆ ಕೇಳಿಯೂ ಶಾಕ್ ಆದ ಸಚಿವರು, ಅಯ್ಯೋ ಇದರಲ್ಲೆಲ್ಲ ನಾನು ಭಾಗಿಯಾಗಲ್ಲ. ನೀವು ಅದೇನೊ ಮಾಡ್ಕೊಳಿ ಎಂದಿದ್ದಾರೆ. ಈ ವೇಳೆ ನೀವು ಬೇಡ ಎಂದರೆ ಬೇಡ ಸರ್ ಎಂದು ಅಧಿಕಾರಿಗಳು ಮತ್ತೆ ಹೇಳಿದ್ದಾರೆ. ನಾನು ಬೇಡ ಎಂದು ಹೇಳಲ್ಲ. ಆದರೆ ಇಷ್ಟೊಂದು ಹಣ ಯಾಕೆ? ಅದರ ಮೊತ್ತ ಕಡಿಮೆ‌ಮಾಡಿ ಎನ್ನುವುದು ನನ್ನ ಅಭಿಪ್ರಾಯ ಎಂದು ಸಚಿವ ಶಿವಲಿಂಗೇಗೌಡರು ತಿಳಿಸಿದರು.

ಕ್ರೌಡ್ ಮ್ಯಾನೇಜ್ಮೆಂಟ್​​ಗಾಗಿ ಎಐ ಟೆಕ್ನಾಲಜಿ ಬಳಸಲು 12 ಲಕ್ಷ ಮೀಸಲು ಬಗ್ಗೆಯೂ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದು, ಈ ಎಐ ಬಗ್ಗೆ ನಂಗೇನೂ ಗೊತ್ತಿಲ್ಲ. ನಂಗೆ ಗೊತ್ತಿರದಿಲ್ಲೊದನ್ನ ಗೊತ್ತು ಎನ್ನಲ್ಲ. ನೀವು ಅದೇನೋ ಮಾಡಿ ಎಂದು ಸಚಿವರು ಅಧಿಕಾರಿಗಳಿಗೆ ಹೇಳಿದರು.

ಕಾಮಗಾರಿಗಳ ಬಿಲ್​​​ ಕಡಿಮೆ ಮಾಡಿ ಎಂದು ಸಭೆಯಲ್ಲಿ ಗುತ್ತಿಗೆದಾರನ ಜತೆ ಶಿವಲಿಂಗೇಗೌಡರು ಚೌಕಾಸಿ ಮಾಡಿದ ಪ್ರಸಂಗವೂ ನಡೆಯಿತು. ದೇವರ ಕೆಲಸ ಮಾಡ್ತೀರಾ ಕಡಿಮೆ ದರಕ್ಕೆ ಕೆಲಸ ಮಾಡಿ ಎಂದ ಸಚಿವರು, ಕೆಲಸ ಚೆನ್ನಾಗಿ ಮಾಡದಿದ್ರೆ ನಾನು ಬಿಲ್​ ಕೊಡುವುದಿಲ್ಲ ಎಂದೂ ಎಚ್ಚರಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular