HomeKarnatakaಪ್ರತಿದಿನ ಊಟ ಬಡಿಸುತ್ತಿದ್ದ ನೌಕರ ನಿವೃತ್ತಿ; ವಿಶೇಷ ರೀತಿಯಲ್ಲಿ ಬೀಳ್ಕೊಟ್ಟ ಆಯುಕ್ತ....!

ಪ್ರತಿದಿನ ಊಟ ಬಡಿಸುತ್ತಿದ್ದ ನೌಕರ ನಿವೃತ್ತಿ; ವಿಶೇಷ ರೀತಿಯಲ್ಲಿ ಬೀಳ್ಕೊಟ್ಟ ಆಯುಕ್ತ….!

ಶಿವಮೊಗ್ಗ: ಮಹಾನಗರ ಪಾಲಿಕೆ ಆಯುಕ್ತರೊಬ್ಬರು ತಮ್ಮ ಇಲಾಖೆಯ ನಿವೃತ್ತ ನೌಕರನೊಬ್ಬನನ್ನು ವಿಶೇಷ ರೀತಿಯಲ್ಲಿ ಬೀಳ್ಕೊಡುವ ಮೂಲಕ ಎಲ್ಲರಿಗೂ ಮಾದರಿ ಆಗಿದ್ದಾರೆ.

ಶಿವಮೊಗ್ಗ ಪಾಲಿಕೆಯ ಕಮೀಷನರ್ ಮಾಯಣ್ಣಗೌಡ ತಮ್ಮ ಆಪ್ತ ಶಾಖೆಯ ನೌಕರ ಕರಿಯಣ್ಣ ನಿವೃತ್ತಿಯಾದ ದಿನದಂದು ಕರಿಯಣ್ಣನವರಿಗೆ ತಾವೇ ಸಿಹಿ ಊಟ ಬಡಿಸಿದ್ದಾರೆ.

ಕರಿಯಣ್ಣ, ಕಮೀಷನರ್ ಮಾಯಣ್ಣಗೌಡ ಅವರಿಗೆ ಪ್ರತಿ ದಿನ ಊಟ, ತಿಂಡಿ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಜುಲೈ 31ರಂದು ಕರಿಯಣ್ಣ ನಿವೃತ್ತಿಯಾದರು. ಅಂದು ಮಧ್ಯಾಹ್ನ ಊಟದ ವೇಳೆ ಕಚೇರಿಯಲ್ಲಿ ನಡೆದಿದ್ದೇ ಬೇರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿದಿನ ಕರಿಯಣ್ಣ, ಕಮೀಷನರ್ ಗೆ ಊಟ ಬಡಿಸುತ್ತಿದ್ದರು. ಆದರೆ ಅಂದು ಕರಿಯಣ್ಣನವರಿಗೆ ಕಮೀಷನರ್ ತಾವೇ ಊಟದ ವ್ಯವಸ್ಥೆ ಮಾಡಿ, ಪ್ರತಿದಿನ ತಾವು ಊಟಕ್ಕೆ ಕುಳಿತುಕೊಳ್ಳುವ ಜಾಗದಲ್ಲಿ ಕರಿಯಣ್ಣರನ್ನು ಕೂರಿಸಿ ಹೋಳಿಗೆ ಊಟ ಬಡಿಸಿ ವಿಶೇಷವಾಗಿ ಬೀಳ್ಕೊಟ್ಟಿದ್ದಾರೆ.

ಕರಿಯಣ್ಣ ನಿವೃತ್ತಿಯ ದಿನ ಜೀವನದುದ್ದಕ್ಕೂ ನೆನಪಲ್ಲಿರುವಂತೆ ಕಮೀಷನರ್ ಮಾಯಣ್ಣ ಮಾಡಿದ್ದಾರೆ. ಕಮೀಷನರ್ ನಡೆಗೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular