HomeLatest Newsಅನುಮತಿಯಿಲ್ಲದೆ ಹೆಸರು ಬಳಕೆ: ಟಿ20 ಟೂರ್ನಿ ಆಯೋಜಕರಿಗೆ ಶಿಖರ್ ಧವನ್ ಲೀಗಲ್ ನೋಟಿಸ್!

ಅನುಮತಿಯಿಲ್ಲದೆ ಹೆಸರು ಬಳಕೆ: ಟಿ20 ಟೂರ್ನಿ ಆಯೋಜಕರಿಗೆ ಶಿಖರ್ ಧವನ್ ಲೀಗಲ್ ನೋಟಿಸ್!

ಭಾರತೀಯ ಕ್ರಿಕೆಟ್ ತಂಡದ ಮಾಜಿ ದೈತ್ಯ ಆರಂಭಿಕ ಬ್ಯಾಟರ್ ಶಿಖರ್ ಧವನ್ ಅವರು ವಿಶ್ವ ಟಿ೨೦ ಕಾಂಟಿನೆಂಟ್ ಕಪ್ ಆಯೋಜಕರ ವಿರುದ್ಧ ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಗಮನಕ್ಕೆ ತರದೆ ಅಥವಾ ಯಾವುದೇ ಅನುಮತಿ ಪಡೆಯದೆ ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಮುಂಬರುವ ಈ ಟೂರ್ನಿಯಲ್ಲಿ ತಾನು ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ಧವನ್, ಆಯೋಜಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಧವನ್, ವಿಶ್ವ ಟಿ೨೦ ಕಾಂಟಿನೆಂಟ್ ಕಪ್‌ನಲ್ಲಿ ತಾನು ಸ್ಪರ್ಧಿಸುತ್ತಿರುವಂತೆ ಬಿಂಬಿಸಿರುವುದನ್ನು ಗಮನಿಸಿದ್ದೇನೆ. ತಮ್ಮ ಪೂರ್ವಾನುಮತಿಯಿಲ್ಲದೆ ಅಥವಾ ಗಮನಕ್ಕೆ ತರದೆ ಹೆಸರನ್ನು ಬಳಸಿಕೊಳ್ಳಲಾಗಿದೆ. ಈ ಸಂಬಂಧ ತಮ್ಮ ಕಾನೂನು ತಂಡವು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಅಧಿಕೃತ ಮೂಲಗಳಿಂದ ಬಾರದ ಇಂತಹ ಸುಳ್ಳು ಪ್ರಕಟಣೆಗಳನ್ನು ಅಭಿಮಾನಿಗಳು ಹಾಗೂ ಮಾಧ್ಯಮಗಳು ನಂಬಬಾರದು ಎಂದು ವಿನಂತಿಸಿದ್ದಾರೆ.

ಈ ವರ್ಷದ ಡಿಸೆಂಬರ್‌ನಲ್ಲಿ ಹಾಂಗ್ ಕಾಂಗ್‌ನಲ್ಲಿ ವಿಶ್ವ ಟಿ೨೦ ಕಾಂಟಿನೆಂಟ್ ಕಪ್ ಟೂರ್ನಿ ಆಯೋಜಿಸಲು ಸಿದ್ಧತೆ ನಡೆಸಿಡಲಾಗಿದೆ. ಅಥೆರಾ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ನೇತೃತ್ವದಲ್ಲಿ ನಡೆಯುವ ಈ ಟೂರ್ನಿಯಲ್ಲಿ ವಿವಿಧ ದೇಶಗಳ ನಿವೃತ್ತ ಅಂತಾರಾಷ್ಟ್ರೀಯ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಏಷ್ಯಾ, ಆಫ್ರಿಕಾ, ಯುರೋಪ್ ಹಾಗೂ ಉತ್ತರ ಅಮೆರಿಕ ಪ್ರತಿನಿಧಿಸುವ ನಾಲ್ಕು ತಂಡಗಳ ನಡುವೆ ಒಟ್ಟು ಒಂಬತ್ತು ಪಂದ್ಯಗಳು ನಡೆಯಲಿವೆ ಎಂದು ಆಯೋಜಕರು ಪ್ರಚಾರ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಈ ಟೂರ್ನಿಯಲ್ಲಿ ತಮ್ಮ ಭಾಗವಹಿಸುವಿಕೆಯ ಬಗ್ಗೆ ಯಾವುದೇ ಒಪ್ಪಿಗೆ ನೀಡಿಲ್ಲ ಎಂದು ಶಿಖರ್ ಧವನ್ ಈಗ ಸ್ಪಷ್ಟಪಡಿಸಿದ್ದಾರೆ. ೨೦೨೪ರ ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್‌ಗೆ ಅಧಿಕೃತ ವಿದಾಯ ಘೋಷಿಸಿದ್ದ ಧವನ್, ಭಾರತದ ಪರ ಹಲವು ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ೨೦೧೩ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಡಗೈ ಬ್ಯಾಟರ್, ತಮ್ಮ ಹೆಸರಿನ ದುರ್ಬಳಕೆ ವಿರುದ್ಧ ಕಠಿಣ ಕಾನೂನು ಹೋರಾಟಕ್ಕೆ ಮುಂದಾಗಿರುವುದು ಕ್ರೀಡಾಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular