HomeKarnatakaBREAKING NEWS: ಪೆಟ್ರೋಲ್ ಸುರಿದು ಶೆಡ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಇಬ್ಬರು ಮಹಿಳೆಯರು ಸಜೀವದಹನ

BREAKING NEWS: ಪೆಟ್ರೋಲ್ ಸುರಿದು ಶೆಡ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಇಬ್ಬರು ಮಹಿಳೆಯರು ಸಜೀವದಹನ

ಬಾಗಲಕೋಟೆ: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಇಬ್ಬರು ಮಹಿಳೆಯರು ಸಜೀವದಹನವಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ತಗಡಿನ ಶೆಡ್ ಗೆ ಪೆಟ್ರೋಲ್ ಸುರಿದು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಶೆಡ್ ನಲ್ಲಿದ್ದ ಇಬ್ಬರು ಮಹಿಳೆಯರು ಸಜೀವದಹನವಾಗಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬೆಳಗಲಿಯಲ್ಲಿ ಈ ಘಟನೆ ನಡೆದಿದೆ.

ಬೆಳಗಲಿ ಗ್ರಾಮದ ಜೈಬಾನ್ (55) ಹಾಗೂ ಶಬಾನ್ (25) ಮೃತ ಮಹಿಳೆಯರು. ಗಾಯಾಳುಗಳಾದ ದಸ್ತಗಿರಿಸಾಬ್, ಸುಬಾನ್ ಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular