HomeKarnatakaಚಿನ್ನಾಭರಣ ಒತ್ತೆ ಇಟ್ಟವರಿಗೆ ಸೇಟು ಶಾಕ್: ಗಿರವಿ ಇಟ್ಟಿದ್ದ ಆಭರಣಗಳೊಂದಿಗೆ ಪರಾರಿ

ಚಿನ್ನಾಭರಣ ಒತ್ತೆ ಇಟ್ಟವರಿಗೆ ಸೇಟು ಶಾಕ್: ಗಿರವಿ ಇಟ್ಟಿದ್ದ ಆಭರಣಗಳೊಂದಿಗೆ ಪರಾರಿ

ಬೆಂಗಳೂರು: ಗಿರವಿ ಇಟ್ಟಿದ್ದ ಆಭರಣಗಳ ಜೊತೆಗೆ ಸೇಟು ಪರಾರಿಯಾದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕಾಚನಾಯಕನಹಳ್ಳಿಯಲ್ಲಿ ನಡೆದಿದೆ.

ಗಿರವಿ ಅಂಗಡಿ ಮುಚ್ಚಿ ರಾಜಸ್ಥಾನ ಮುನಾರಾಮ್ ಸೇಟು ಪರಾರಿಯಾಗಿದ್ದಾನೆ. ಆನಂದ್ ಜುವೆಲರ್ಸ್ ಅಂಡ್ ಕೇಸರ್ ಬ್ಯಾಂಕರ್ಸ್ ಮಾಲೀಕ ಮುನಾರಾಮ್ 10 ವರ್ಷದಿಂದ ಗಿರವಿ ಅಂಗಡಿ ನಡೆಸುತ್ತಿದ್ದ. ಅಂಗಡಿಯಲ್ಲಿ ಚಿನ್ನಾಭರಣ ಅಡವಿಟ್ಟು ಜನ ಹಣ ಪಡೆದುಕೊಂಡಿದ್ದರು.

ಲಕ್ಷಾಂತರ ರೂಪಾಯಿ ವಂಚನೆ ಮಾಡಿ ಸೇಟು ಎಸ್ಕೇಪ್ ಆಗಿದ್ದಾನೆ. ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದು, ನೂರಾರು ಜನರಿಗೆ ವಂಚಿಸಿದ್ದಾನೆ. ಠಾಣೆಗೆ ದೂರು ನೀಡಲು ವಂಚನೆಗೊಳಗಾದ ನೂರಾರು ಗ್ರಾಹಕರು ಸೂರ್ಯ ನಗರ ಪೊಲೀಸ್ ಠಾಣೆ ಬಳಿ ಜಮಾವಣೆಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular