HomeKarnatakaಕಿರುತೆರೆ ನಟಿ ವನಿತಾ ಅರೆಸ್ಟ್

ಕಿರುತೆರೆ ನಟಿ ವನಿತಾ ಅರೆಸ್ಟ್

ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ ವನಿತಾ ಅವರನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ ಪರಿಚಿಯವಾಗುತ್ತಿದ್ದ ವನಿತಾ, ತಾನು ಕಿರುತೆರೆ ನಟಿ ಎಂದು ಸ್ನೇಹ ಬೆಳೆಸುತ್ತಿದ್ದಳು. ನಂತರ ಹಣವಂತರನ್ನು ಟಾರ್ಗೆಟ್ ಮಾಡಿ ಅವರೊಂದಿಗೆ ಸಲುಗೆ ಬೆಳೆಸಿ ನಿರಂತರವಾಗಿ ಮಾತನಾಡಿ ಹಣ ಪಡೆದು ವಂಚಿಸುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾನು ಆರ್ಥಿಕವಾಗಿ ಕಷ್ಟದಲ್ಲಿದ್ದೇನೆ ಎಂದು ನಂಬಿಸುತ್ತಿದ್ದ ನಟಿ ವನಿತಾ, ನನ್ನ ಚಿನ್ನದ ಆಭರಣಗಳನ್ನು ಅಡವಿಟ್ಟಿದ್ದೇನೆ, ಅದನ್ನು ಬಿಡಿಸಿಕೊಳ್ಳಲು ತುರ್ತಾಗಿ ಹಣ ಬೇಕಾಗಿದೆ. ಎರಡರಿಂದ ಮೂರು ದಿನಗಳಲ್ಲಿ ಸಾಲದ ಹಣವನ್ನು ವಾಪಸ್ ಕೊಡುತ್ತೇನೆ ಎಂದು ನಂಬಿಸಿ ಹಣ ಪಡೆಯುತ್ತಿದ್ದಳು. ಹೀಗೆ ಹಣ ಪಡೆಯುವಾಗ ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಜಾಗಗಳನ್ನು ಹುಡುಕಿ ಅಲ್ಲಿಗೆ ಬರುವಂತೆ ಹೇಳಿ ಹಣ ಪಡೆಯುತ್ತಿದ್ದಳು. ಹೀಗೆ ಹಣ ಪಡೆದವರು ನಾಪತ್ತೆಯಾಗುತ್ತಿದ್ದಳು.

ಮೂರ್ನಾಲ್ಕು ದಿನದ ಬಳಿಕ ಹಣ ಕೊಟ್ಟವರು ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಕರೆ ಸ್ವೀಕರಿಸುತ್ತಿಲ್ಲವೆಂದು ಮೆಸೇಜ್ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡದೆ ವಂಚಿಸುತ್ತಿದ್ದಳು ಎನ್ನಲಾಗಿದೆ. ಹೀಗೆ ವನೀತಾಳಿಂದ ಹಣ ಕಳೆದುಕೊಂಡ ಯುವಕನೊಬ್ಬ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು.

ತನಿಖೆ ಆರಂಭಿಸಿದ ಪೊಲೀಸರಿಗೆ ಈಕೆಯ ವಂಚನೆಯ ಜಾಲ ದೊಡ್ಡದಿದೆ ಎಂಬುದು ಗೊತ್ತಾಗಿದೆ. ವನಿತಾ ವಿರುದ್ಧ ಗೋವಿಂದರಾಜನಗರ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಗಳಲ್ಲೂ ಈಕೆಯ ವಿರುದ್ಧ ಈ ಹಿಂದೆ ದೂರುಗಳು ದಾಖಲಾಗಿವೆ. ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ತನಿಖೆ ನಡೆಸಿ, ವಂಚಕಿ ನಟಿಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಈಕೆಯೊಂದಿಗಿನ ಜಾಲದ ಬಗ್ಗೆ ತನಿಖೆ ಆರಂಭಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular