HomeEntertainmentಅಲ್ಲು ಅರ್ಜುನ್ ಆಸ್ತಿ ಎಂದ ನೆಟ್ಟಿಗನಿಗೆ ನಟಿ ಸೀರತ್ ಕಪೂರ್ ಖಡಕ್ ತಿರುಗೇಟು: ಸೋಷಿಯಲ್ ಮೀಡಿಯಾದಲ್ಲಿ...

ಅಲ್ಲು ಅರ್ಜುನ್ ಆಸ್ತಿ ಎಂದ ನೆಟ್ಟಿಗನಿಗೆ ನಟಿ ಸೀರತ್ ಕಪೂರ್ ಖಡಕ್ ತಿರುಗೇಟು: ಸೋಷಿಯಲ್ ಮೀಡಿಯಾದಲ್ಲಿ ಉತ್ತರ ವೈರಲ್

ತಮ್ಮನ್ನು ಒಬ್ಬ ನಟನ ಆಸ್ತಿ ಎಂದು ಕರೆದ ಸಾಮಾಜಿಕ ಜಾಲತಾಣದ ಬಳಕೆದಾರನಿಗೆ ನಟಿ ಸೀರತ್ ಕಪೂರ್ ಅತ್ಯಂತ ಘನತೆಯಿಂದಲೇ ತಕ್ಕ ಉತ್ತರ ನೀಡಿದ್ದಾರೆ. ಈ ಘಟನೆ ಸದ್ಯ ಸಿನಿಮಾ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ಸೀರತ್ ಕಪೂರ್ ಅವರು ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಸುಂದರ ಫೋಟೋವೊಂದನ್ನು ಹಂಚಿಕೊಂಡಿದ್ದರು. ಈ ಫೋಟೋಗೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಅಲ್ಲು ಅರ್ಜುನ್ ಆಸ್ತಿ ಎಂದು ಕಮೆಂಟ್ ಮಾಡುವ ಮೂಲಕ ಅಸಭ್ಯವಾಗಿ ವರ್ತಿಸಿದ್ದರು. ಈ ಕಮೆಂಟ್ ಅನ್ನು ನಿರ್ಲಕ್ಷಿಸದ ಸೀರತ್, ಮಹಿಳೆಯ ಘನತೆಯನ್ನು ಎತ್ತಿ ಹಿಡಿಯುವಂತಹ ಉತ್ತರ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಸೀರತ್ ನೀಡಿದ ಉತ್ತರ ಹೀಗಿದೆ: ಹಾರ್ಟ್ ಎಮೋಜಿ ಬಳಸಿದ ತಕ್ಷಣ ನೀವು ಹೇಳಿದ ಮಾತು ಗೌರವಯುತ ಎನಿಸಿಕೊಳ್ಳುವುದಿಲ್ಲ. ಒಬ್ಬ ಮಹಿಳೆ ಎಂದಿಗೂ ಯಾರೊಬ್ಬರ ಆಸ್ತಿಯಲ್ಲ. ಅವಳಿಗೂ ತನ್ನದೇ ಆದ ಗುರುತು, ಕನಸು ಮತ್ತು ಧ್ವನಿ ಇರುತ್ತದೆ. ನಟಿಯನ್ನು ಒಬ್ಬ ವ್ಯಕ್ತಿಯಾಗಿ ಗೌರವಿಸುವುದನ್ನು ಕಲಿಯಿರಿ ಹೊರತು, ಮಾಲೀಕತ್ವ ಪ್ರದರ್ಶಿಸಬೇಡಿ ಎಂದು ಅವರು ತಿರುಗೇಟು ನೀಡಿದ್ದಾರೆ. ಸೀರತ್ ಅವರ ಈ ಧೈರ್ಯದ ನಡೆಗೆ ನೆಟ್ಟಿಗರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಸೀರತ್ ಅವರು ಈ ನಟನೊಂದಿಗೆ ಇರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಅಂದಿನಿಂದ ಈ ಇಬ್ಬರು ನಟರ ಸ್ನೇಹದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಈ ರೀತಿಯ ಅವಹೇಳನಕಾರಿ ಕಮೆಂಟ್ ಮಾಡಲು ಮುಂದಾಗಿದ್ದರು.

ನಟರ ಮುಂದಿನ ಸಿನಿಮಾಗಳು: ಸೀರತ್ ಕಪೂರ್ ಅವರು ಸದ್ಯ ದಿ ಬ್ಲಾಕ್ ಗೋಲ್ಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಅಲ್ಲು ಅರ್ಜುನ್ ಅವರು ಅಟ್ಲಿ ನಿರ್ದೇಶನದ ರಾಕಾ ಚಿತ್ರಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ಇದರ ಜೊತೆಗೆ ಲೋಕೇಶ್ ಕನಕರಾಜ್ ಅವರೊಂದಿಗೂ ಅಲ್ಲು ಅರ್ಜುನ್ ಸಿನಿಮಾ ಮಾಡುವ ಸಾಧ್ಯತೆ ಇದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular