HomeLatest Newsಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಹಿಡಿದು ಲಕ್ಷಾಂತರ ರೂ. ಗಳಿಸಿದ ಮುಂಬೈ ಯುವಕ; ಹಠವಿದ್ದರೆ ಏನು ಬೇಕಾದರೂ...

ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಹಿಡಿದು ಲಕ್ಷಾಂತರ ರೂ. ಗಳಿಸಿದ ಮುಂಬೈ ಯುವಕ; ಹಠವಿದ್ದರೆ ಏನು ಬೇಕಾದರೂ ಸಾಧಿಸಬಹುದು!

ನಮ್ಮಲ್ಲಿ ಹೆಚ್ಚಿನವರು ಕೆಲಸ ಮಾಡಲು ಅತ್ಯಾಧುನಿಕ ಸೌಲಭ್ಯಗಳು ಬೇಕು ಎಂದು ಬಯಸುತ್ತಾರೆ. ಆದರೆ, ಸಾಧಿಸುವ ಛಲವಿದ್ದರೆ ಕೇವಲ ಇಂಟರ್ನೆಟ್ ಮತ್ತು ಒಂದು ಸಾಮಾನ್ಯ ಕಂಪ್ಯೂಟರ್ ಮೂಲಕವೂ ಇಡೀ ಭವಿಷ್ಯವನ್ನೇ ಬದಲಿಸಬಹುದು ಎಂಬುದನ್ನು ಮುಂಬೈನ ಯುವ ಉದ್ಯಮಿ ಆದಿತ್ಯ ಸಾಬೀತುಪಡಿಸಿದ್ದಾರೆ.

ಹಳೆಯ ಲ್ಯಾಪ್‌ಟಾಪ್‌ನಿಂದ ಶುರುವಾದ ಪಯಣ: ಆದಿತ್ಯ ತಮ್ಮ ಈ ಯಶಸ್ಸಿನ ಪಯಣವನ್ನು ಎಕ್ಸ್ (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 200 ದಿನಗಳ ಹಿಂದೆ ಅವರು ಅತೀ ನಿಧಾನವಾಗಿ ಕೆಲಸ ಮಾಡುವ ಸೆಕೆಂಡ್ ಹ್ಯಾಂಡ್ ಲ್ಯಾಪ್‌ಟಾಪ್ ಮೂಲಕ ಆನ್‌ಲೈನ್‌ನಲ್ಲಿ ಕೆಲಸ ಮಾಡಲು ಆರಂಭಿಸಿದ್ದರು. ಅಂದು ಅವರು ಗಳಿಸಿದ ಮೊದಲ ಡಾಲರ್ ಇಂದು ಸುಮಾರು 2,52,751 ರೂಪಾಯಿ ($2,800 ಕ್ಕೂ ಹೆಚ್ಚು) ಲಾಭವಾಗಿ ಬೆಳೆದು ನಿಂತಿದೆ.

ಮ್ಯಾಕ್‌ಬುಕ್ ಕನಸು ನನಸು: ಒಬ್ಬ ‘ಸೊಲೊಪ್ರೆನರ್’ (Solopreneur) ಆಗಿ ಕೆಲಸ ಆರಂಭಿಸಿದ ಆದಿತ್ಯ, ಸತತ ಪರಿಶ್ರಮದಿಂದ ತಮ್ಮ ಎಕ್ಸ್ ಖಾತೆಯನ್ನು 13,000ಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದುವಂತೆ ಬೆಳೆಸಿದರು. ಈ ಹಣದಿಂದಲೇ ಅವರು ತಮ್ಮ ನೆಚ್ಚಿನ ಆಪಲ್ ಮ್ಯಾಕ್‌ಬುಕ್ (MacBook) ಖರೀದಿಸಿದ್ದಾರೆ. “ನನ್ನ ಮುಖದಲ್ಲಿರುವ ನಗು ನೋಡಿ, ಕಳೆದ 3-4 ವರ್ಷಗಳಲ್ಲಿ ನಾನು ಇಷ್ಟು ಸಂತೋಷವಾಗಿರಲಿಲ್ಲ” ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆಟ್ಟಿಗರ ಮೆಚ್ಚುಗೆ: ಆದಿತ್ಯ ಅವರ ಈ ಪೋಸ್ಟ್ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳ ಮಹಾಪೂರವೇ ಹರಿಯುತ್ತಿದೆ. “ಲ್ಯಾಪ್‌ಟಾಪ್ ಮತ್ತು ಇಂಟರ್ನೆಟ್ ಇದ್ದರೆ ಸಾಕು, ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ದೊಡ್ಡ ಉದಾಹರಣೆ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸೌಲಭ್ಯಗಳ ಕೊರತೆಯನ್ನು ನೆಪ ಮಾಡಿಕೊಳ್ಳುವವರಿಗೆ ಆದಿತ್ಯ ಅವರ ಈ ಸಾಧನೆ ದೊಡ್ಡ ಸ್ಫೂರ್ತಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular