HomeLatest Newsಬಾಗಲಕೋಟೆಯಲ್ಲಿ ಕೊಳಚೆ ನೀರಿನಲ್ಲಿ  ಶಾಲಾ ಮಕ್ಕಳು ತಟ್ಟೆ ತೊಳೆದ ಕೇಸ್ : ಶಿಕ್ಷಕ ಅಮಾನತು.!

ಬಾಗಲಕೋಟೆಯಲ್ಲಿ ಕೊಳಚೆ ನೀರಿನಲ್ಲಿ  ಶಾಲಾ ಮಕ್ಕಳು ತಟ್ಟೆ ತೊಳೆದ ಕೇಸ್ : ಶಿಕ್ಷಕ ಅಮಾನತು.!

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಆಲಬಾಳ ಗ್ರಾಮದ ಶಾಲೆಯೊಂದರಲ್ಲಿ ನಡೆದ ‘ಕೊಳಚೆ ನೀರಿನಲ್ಲಿ ಮಕ್ಕಳು ತಟ್ಟೆ ತೊಳೆದ’ ಪ್ರಕರಣವು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಮಧ್ಯಾಹ್ನದ ಬಿಸಿಯೂಟದ ನಂತರ ಶಾಲೆಯ ಪುಟ್ಟ ಮಕ್ಕಳು ತಾವು ಊಟ ಮಾಡಿದ ತಟ್ಟೆಗಳನ್ನು ಶಾಲೆಯ ಪಕ್ಕದಲ್ಲೇ ಹರಿಯುತ್ತಿದ್ದ ಚರಂಡಿಯ ಕೊಳಚೆ ನೀರಿನಲ್ಲಿ ತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆ ಸಂಬಂಧ ಶಿಕ್ಷಕರೋರ್ವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಶಾಲೆಯಲ್ಲಿ ಮಕ್ಕಳಿಗೆ ತಟ್ಟೆ ತೊಳೆಯಲು ಅಥವಾ ಕೈ ತೊಳೆಯಲು ಸರಿಯಾದ ನೀರಿನ ವ್ಯವಸ್ಥೆ ಇಲ್ಲದ ಕಾರಣ, ಮಕ್ಕಳು ಅನಿವಾರ್ಯವಾಗಿ ಚರಂಡಿ ನೀರನ್ನೇ ಬಳಸುತ್ತಿದ್ದರು ಎಂದು ತಿಳಿದುಬಂದಿದೆ.ನೀರಿನಲ್ಲಿ ತಟ್ಟೆ ತೊಳೆದು, ಅದೇ ತಟ್ಟೆಯಲ್ಲಿ ಮರುದಿನ ಊಟ ಮಾಡುವುದರಿಂದ ಮಕ್ಕಳಿಗೆ ಗಂಭೀರ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿತ್ತು. ಶಾಲಾ ಸಿಬ್ಬಂದಿ ಮತ್ತು ಮುಖ್ಯೋಪಾಧ್ಯಾಯರು ಮಕ್ಕಳನ್ನು ಚರಂಡಿ ನೀರಿಗೆ ಹೋಗದಂತೆ ತಡೆಯದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಈ ಕುರಿತು ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ತಿಪ್ಪೇಸ್ವಾಮಿ ಮಾಹಿತಿ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೋಕಿನ ಶಾಲೆಯೊಂದರಲ್ಲಿ ಮಕ್ಕಳು ಕೊಳಚೆ ನೀರಿನಲ್ಲಿ ತಟ್ಟೆ ತೊಳೆದ ಪ್ರಕರಣ ವಿವಾದಕ್ಕೀಡಾಗಿತ್ತು. ಈ ಬಗ್ಗೆ ತುಂಬಾ ಜನ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿ ಸೂಕ್ತಕ್ರಮ ಕೈಗೊಳ್ಳಲು ಕೋರಿದ್ದಿರಿ. ನಿಮ್ಮ ಕಾಳಜಿಗೆ ವಂದನೆಗಳು.
ಸದರಿ ಪ್ರಕರಣವನ್ನು ಆಯೋಗ ಗಂಭೀರವಾಗಿ ಪರಿಗಣಸಿ ಸಂಬಂಧಿಸಿದವರು ಮೇಲೆ ನಿಯಮನುಸಾರ ಕ್ರಮಕೈಗೊಳ್ಳಲು ಹಾಗೂ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ಸದರಿ ಶಾಲೆಯ ಶಿಕ್ಷಕರನ್ನು ಅಮಾನತ್ತು ಮಾಡಿ ಸೂಕ್ತ ವ್ಯವಸ್ಥೆ ಕಲ್ಪಿಸಿರುವ ವರದಿ ಆಯೋಗಕ್ಕೆ ಸಲ್ಲಿಸಿರುತ್ತಾರೆ. ಆದಷ್ಟು ಸ್ಥಳೀಯಾಡಳಿತಗಳು ಇಂತಹ ಸಮಸ್ಯೆ ಆಗದಂತೆ ಮೂಲಭೂತ ಸೌಲಭ್ಯ ಒದಗಿಸುವುದನ್ನು ಆಯೋಗ ಆಶಿಸುತ್ತದೆ ಎಂದಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular