HomeKarnatakaBig Update: ಅಳ್ನಾವರ-ದಾಂಡೇಲಿ ಡೆಮು ರೈಲು ವೇಳಾಪಟ್ಟಿ ಪರಿಷ್ಕರಣೆ

Big Update: ಅಳ್ನಾವರ-ದಾಂಡೇಲಿ ಡೆಮು ರೈಲು ವೇಳಾಪಟ್ಟಿ ಪರಿಷ್ಕರಣೆ

ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆ ಸಂಪರ್ಕಿಸುವ ರಾಜ್ಯದ ಅತಿ ಚಿಕ್ಕ ರೈಲು ಮಾರ್ಗ ಅಳ್ನಾವರ-ದಾಂಡೇಲಿ. ಫೆಬ್ರವರಿಯಲ್ಲಿ ಈ ಮಾರ್ಗದಲ್ಲಿ ಡೆಮು ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಈಗ ಪ್ರಯಾಣಿಕರ ಬೇಡಿಕೆಯಂತೆ ಡೆಮು ರೈಲು ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ.

ಭಾರತೀಯ ರೈಲ್ವೆ ಅಳ್ನಾವರ-ದಾಂಡೇಲಿ ಡೆಮು ರೈಲು ಸಂಚಾರದ ದಿನ ಹಾಗೂ ವೇಳಾಪಟ್ಟಿ ಬದಲಾವಣೆ ಮಾಡಿ ಆದೇಶವನ್ನು ಹೊರಡಿಸಿದೆ. ಹೊಸ ವೇಳಾಪಟ್ಟಿ  ಮಾರ್ಚ್ 17ರಿಂದ ಜಾರಿಗೆ ಬರಲಿದೆ ಎಂದು ಹೇಳಿದೆ.

ಅಳ್ನಾವರ-ದಾಂಡೇಲಿ ನಡುವೆ ಸಂಚರಿಸುವ ಡೆಮು ರೈಲುಗಳ ಸಂಚಾರದ ದಿನ ಹಾಗೂ ವೇಳಾಪಟ್ಟಿಯಲ್ಲಿ ನೈಋತ್ಯ ರೈಲ್ವೆಯು ಬದಲಾವಣೆ ಮಾಡಿದೆ. ಈ ನೂತನ ಬದಲಾವಣೆಗಳು ಮಾರ್ಚ್ 17, 2026 ರಿಂದ ಜಾರಿಗೆ ಬರಲಿವೆ ಎಂದು ಪ್ರಕಟಣೆ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ವಾರದಲ್ಲಿ 6 ದಿನ (ಭಾನುವಾರ ಹೊರತುಪಡಿಸಿ) ಸಂಚರಿಸುತ್ತಿದ್ದ ಈ ರೈಲುಗಳು, ಇನ್ನು ಮುಂದೆ ಗುರುವಾರ ಹೊರತುಪಡಿಸಿ ವಾರದ ಉಳಿದ 6 ದಿನಗಳ ಕಾಲ ಸಂಚರಿಸಲಿವೆ. ಅಂದರೆ, ಇನ್ನು ಮುಂದೆ ಭಾನುವಾರವೂ ರೈಲು ಸೇವೆ ಲಭ್ಯವಿದ್ದು, ಗುರುವಾರ ರೈಲುಗಳ ಸಂಚಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಪರಿಷ್ಕೃತ ವೇಳಾಪಟ್ಟಿ ವಿವರ

  • ರೈಲು ಸಂಖ್ಯೆ 76501 ಅಳ್ನಾವರ-ದಾಂಡೇಲಿ ಡೆಮು ಅಳ್ನಾವರದಿಂದ ಬೆಳಗ್ಗೆ 05:30ರ ಬದಲಾಗಿ 5 ಗಂಟೆಗೆ ಹೊರಟು, ಬೆಳಗ್ಗೆ 6:15ರ ಬದಲು 5:45ಕ್ಕೆ ದಾಂಡೇಲಿ ತಲುಪಲಿದೆ. ಮರಳಿ ಬರುವಾಗ, ರೈಲು ಸಂಖ್ಯೆ 76502 ದಾಂಡೇಲಿ-ಅಳ್ನಾವರ ಡೆಮು ದಾಂಡೇಲಿಯಿಂದ ಬೆಳಗ್ಗೆ 6:45ರ ಬದಲು 6:15ಕ್ಕೆ ಹೊರಟು, ಬೆಳಗ್ಗೆ 7:30ರ ಬದಲು 7ಕ್ಕೆ ಅಳ್ನಾವರ ತಲುಪಲಿದೆ.
  • ರೈಲು ಸಂಖ್ಯೆ 76503 ಅಳ್ನಾವರ-ದಾಂಡೇಲಿ ಡೆಮು ಬೆಳಗ್ಗೆ 7:40ರ ಬದಲು 7:35ಕ್ಕೆ ಅಳ್ನಾವರದಿಂದ ಹೊರಟು, ಬೆಳಗ್ಗೆ 8:25ರ ಬದಲು 8:20ಕ್ಕೆ ದಾಂಡೇಲಿಗೆ ಆಗಮಿಸಲಿದೆ. ಆದಾಗ್ಯೂ, ರೈಲು ಸಂಖ್ಯೆ 76504 ದಾಂಡೇಲಿ-ಅಳ್ನಾವರ ಡೆಮುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ, ಇದು ಪ್ರಸ್ತುತ ವೇಳಾಪಟ್ಟಿಯ ಪ್ರಕಾರ ಬೆಳಗ್ಗೆ 8:40ಕ್ಕೆ ದಾಂಡೇಲಿಯಿಂದ ಹೊರಟು, ಬೆಳಗ್ಗೆ 9:25ಕ್ಕೆ ಅಳ್ನಾವರ ತಲುಪಲಿದೆ.
  • ರೈಲು ಸಂಖ್ಯೆ 76505 ಅಳ್ನಾವರ-ದಾಂಡೇಲಿ ಡೆಮು ಈಗಿರುವ ಸಂಜೆ 7:30ರ ಬದಲು 6:00ಕೈ ಅಳ್ನಾವರದಿಂದ ಹೊರಟು, ರಾತ್ರಿ 8:15ರ ಬದಲು ಸಂಜೆ 6:45ಕ್ಕೆ ದಾಂಡೇಲಿಗೆ ಆಗಮಿಸಲಿದೆ. ಅದೇ ರೀತಿ ಮರುಪ್ರಯಾಣದಲ್ಲಿ ರೈಲು ಸಂಖ್ಯೆ 76506 ದಾಂಡೇಲಿ-ಅಳ್ನಾವರ ಡೆಮು ರಾತ್ರಿ 8:30ರ ಬದಲು ಸಂಜೆ 7:05ಕ್ಕೆ ದಾಂಡೇಲಿಯಿಂದ ಹೊರಟು, 9:15ರ ಬದಲು ಸಂಜೆ 7:50ಕ್ಕೆ ಅಳ್ಳಾವರ ತಲುಪಲಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular