ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಾಮಾಜಿಕ ಜಾಲತಾಣದ ಮೂಲಕ ತನ್ನ ಗ್ರಾಹಕರಿಗೆ ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಗ್ರಾಹಕರು ಹಲವು ಅಪ್ಲಿಕೇಶನ್‌ಗಳನ್ನು ಅನ್ ಇನ್‌ಸ್ಟಾಲ್ ಮಾಡುವಂತೆ ಸಲಹೆ ನೀಡಿದೆ.
ಸ್ಟೇಟ್ ಬ್ಯಾಂಕ್ ಇಂಡಿಯಾ ‘X’ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಗ್ರಾಹಕರಿಗೆ ನಕಲಿ ಬ್ಯಾಂಕ್ ಪತ್ರ ಮತ್ತು ‘KYC ಅಲರ್ಟ್‌ಗಳನ್ನು ಕಳುಹಿಸುವ ವಂಚಕರ ಬಗ್ಗೆ ಎಚ್ಚರಿಸಿದೆ.
ಈ ಲಿಂಕ್‌ಗಳು ಅಪಾಯಕಾರಿ ಎಪಿಕೆ ಫೈಲ್‌ಗಳನ್ನು ಹೊಂದಿವೆ ಎಂದು ತಿಳಿಸಿರುವ ಬ್ಯಾಂಕ್, ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಂತಹ ಅಧಿಕೃತ ಆಪ್ ಸ್ಟೋರ್‌ಗಳಿಂದ ಮಾತ್ರ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವಂತೆ ಗ್ರಾಹಕರಿಗೆ ಸಲಹೆ ನೀಡಿದೆ.
ವಂಚಕರು ಅಪಾಯಕಾರಿ ಎಪಿಕೆ ಲಿಂಕ್‌ಗಳೊಂದಿಗೆ ನಕಲಿ ಬ್ಯಾಂಕ್ ಪತ್ರ ಮತ್ತು KYC ಅಲರ್ಟ್‌ಗಳನ್ನು ಕಳುಹಿಸುತ್ತಿದ್ದಾರೆ. ಒಂದು ಬಾರಿ ಟ್ಯಾಪ್ ಮಾಡಿದರೆ ನಿಮ್ಮ ಫೋನ್ ಹ್ಯಾಕ್ ಆಗಬಹುದು ಮತ್ತು ನಿಮ್ಮ ಹಣ ಕಳೆದುಕೊಳ್ಳಬಹುದು ಎಂದು ಎಚ್ಚರಿಸಿದೆ.
ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಮಾತ್ರ ಆಪ್‌ಗಳನ್ನು ಡೌನ್‌ಲೋಡ್ ಮಾಡಿ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಅನುಮಾನಾಸ್ಪದ ಎಪಿಕೆಗಳನ್ನು ಎಂದಿಗೂ ಇನ್‌ಸ್ಟಾಲ್ ಮಾಡಬೇಡಿ. ಸೈಬರ್ ವಂಚನೆಯನ್ನು ವರದಿ ಮಾಡಲು 1930ಗೆ ಕರೆ ಮಾಡಿ ಎಂದು ಬ್ಯಾಂಕ್ ಹೇಳಿದೆ.
ಪ್ಯಾನ್ ಕಾರ್ಡ್ ವಿವರಗಳನ್ನು ಸಕ್ರಿಯಗೊಳಿಸದ ಕಾರಣ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಸಂದೇಶ ಬರುತ್ತಿದೆ. ಗ್ರಾಹಕರ ನಂಬಿಕೆಯನ್ನು ಗಳಿಸಲು ಮತ್ತೊಂದು ಸಂದೇಶವನ್ನು ಕಳುಹಿಸಲಾಗಿದ್ದು, ಅದು ಬ್ರಾಂಚ್ ಮ್ಯಾನೇಜರ್‌ನಿಂದ ಬಂದಂತೆ ಕಾಣುತ್ತದೆ. ಇದು ಬಳಕೆದಾರರನ್ನು SBI ಬ್ಯಾಂಕ್ APK ಇನ್‌ಸ್ಟಾಲ್ (Install SBI Bank APK) ಮಾಡುವಂತೆ ಕೇಳುತ್ತದೆ ಎಂದು ಬ್ಯಾಂಕ್ ಹೇಳಿದೆ.
ಬ್ಯಾಂಕ್ ನೀಡಿರುವ ಸಲಹೆ
- ಪ್ಲೇ ಸ್ಟೋರ್/ ಆಪ್ ಸ್ಟೋರ್‌ನಿಂದ ಮಾತ್ರ ಆಪ್ ಡೌನ್‌ಲೋಡ್ ಮಾಡಿ.
- ಅಪರಿಚಿತ ಮೂಲದ ಎಪಿಕೆ ಫೈಲ್ ಎಂದಿಗೂ ಕ್ಲಿಕ್ ಮಾಡಬೇಡಿ.
ನಕಲಿ ಅಪ್ಲಿಕೇಶನ್‌ಗಳನ್ನು ಹೇಗೆ ಗುರುತಿಸುವುದು ಎಂದು ಸಹ ಮಾಹಿತಿ ನೀಡಲಾಗಿದೆ. ಯಾವಾಗಲೂ ಅಪ್ಲಿಕೇಶನ್ ಅನ್ನು ಯಾರು ತಯಾರು ಮಾಡಿದ್ದಾರೆ ನೋಡಿ. ನಕಲಿ ಅಪ್ಲಿಕೇಶನ್‌ಗಳು ಹೆಚ್ಚಾಗಿ ಅಸಲಿ ಬ್ರ್ಯಾಂಡ್‌ಗಳ ಹೆಸರನ್ನೇ ಹೋಲುವ ಹೆಸರುಗಳನ್ನು ಬಳಸುತ್ತವೆ ಎಂದು ಎಚ್ಚರಿಸಲಾಗಿದೆ.
ಅಪ್ಲಿಕೇಶನ್ ಇನ್ ಸ್ಟಾಲ್ ಮಾಡುವ ಮೊದಲು ಡೆವಲಪರ್ ಹೆಸರಿನ ಮೇಲೆ ಟ್ಯಾಪ್ ಮಾಡಿ ಮತ್ತು ಅವರು ಬಿಡುಗಡೆ ಮಾಡಿರುವ ಇತರ ಅಪ್ಲಿಕೇಶನ್ ಪರಿಶೀಲಿಸಿ. ಅದಕ್ಕೆ ಕಡಿಮೆ ವಿಮರ್ಶೆಗಳಿದ್ದು, ರೇಟಿಂಗ್ ಮಾತ್ರ ಹೆಚ್ಚಿದ್ದರೆ ಅದು ಅನುಮಾನಾಸ್ಪದವಾಗಿರುತ್ತದೆ.
ಅಧಿಕೃತ ಅಪ್ಲಿಕೇಶನ್‌ಗಳು ಸಾಮಾನ್ಯವಾಗಿ ಲಕ್ಷಾಂತರ ಡೌನ್‌ಲೋಡ್‌ಗಳನ್ನು ಹೊಂದಿರುತ್ತವೆ. ನಕಲಿ ಆಪ್‌ಗಳು ಕಡಿಮೆ ಇನ್‌ಸ್ಟಾಲ್ ಸಂಖ್ಯೆಯನ್ನು ಹೊಂದಿರುತ್ತವೆ. ಕಳಪೆ ವಿನ್ಯಾಸ, ಕಾಗುಣಿತ ತಪ್ಪುಗಳು ಅಥವಾ ಮಸುಕಾದ ಚಿತ್ರಗಳು ನಕಲಿಯಾಗಿರುತ್ತವೆ.

