HomeKarnatakaBREAKING: ಸ್ಥಳೀಯರು ಸೇರಿ ನ್ಯಾಮತಿ SBI ಬ್ಯಾಂಕ್ ನಲ್ಲಿ 17 ಕೆಜಿ ಚಿನ್ನ ಕಳವು ಮಾಡಿದ್ದ...

BREAKING: ಸ್ಥಳೀಯರು ಸೇರಿ ನ್ಯಾಮತಿ SBI ಬ್ಯಾಂಕ್ ನಲ್ಲಿ 17 ಕೆಜಿ ಚಿನ್ನ ಕಳವು ಮಾಡಿದ್ದ 5 ಮಂದಿ ಅರೆಸ್ಟ್

ದಾವಣಗೆರೆ: ನ್ಯಾಮತಿ ಎಸ್.ಬಿ.ಐ. ಬ್ಯಾಂಕ್ ನಲ್ಲಿ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ವಿಜಯಕುಮಾರ್(32), ಅಜಯ್ ಕುಮಾರ್(33), ನ್ಯಾಮತಿಯ ನಿವಾಸಿ ಮಂಜುನಾಥ್(40), ಹೊನ್ನಾಳಿಯ ಅಭಿಷೇಕ್(28), ಚಂದ್ರಶೇಖರ್(34) ಅವರನ್ನು ಬಂಧಿಸಿ 224 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ತಮಿಳುನಾಡು ಮೂಲದ ಪರಮಾನಂದನ ಬಂಧನಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗಿದೆ. ಬಂಧಿತ ವಿಜಯಕುಮಾರ್ ಮತ್ತು ಅಜಯಕುಮಾರ್ ಕಳೆದ ಎರಡು ವರ್ಷಗಳಿಂದ ನಾಮತಿಯಲ್ಲಿ ಬೇಕರಿ ನಡೆಸುತ್ತಿದ್ದರು. ವಿಜಯಕುಮಾರ್ ಮತ್ತು ಅಜಯ್ ಕುಮಾರ್ ಅವರಿಗೆ ಉಳಿದವರು ಸಾಥ್ ನೀಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನವೆಂಬರ್ 26ರಂದು ಬ್ಯಾಂಕ್ ನಲ್ಲಿದ್ದ 17 ಕೆಜಿ, 750 ಗ್ರಾಂ ಚಿನ್ನ ದೋಚಲಾಗಿತ್ತು. ಬ್ಯಾಂಕಿನಲ್ಲಿ 509 ಗ್ರಾಹಕರು ಅಡವಿಟ್ಟಿದ ಚಿನ್ನವನ್ನು ಕಳವು ಮಾಡಿದ್ದರು. ಉಳಿದ ಚಿನ್ನವನ್ನು ಜಪ್ತಿ ಹಾಗೂ ಪರಮಾನಂದನ ಬಂಧನಕ್ಕಾಗಿ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular