HomeLatest NewsBIG NEWS: ರೇಣುಕಾ ಯಲ್ಲಮ್ಮ ಭಕ್ತರಿಗೆ ಗುಡ್ ನ್ಯೂಸ್: ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ಈ ದಿನ...

BIG NEWS: ರೇಣುಕಾ ಯಲ್ಲಮ್ಮ ಭಕ್ತರಿಗೆ ಗುಡ್ ನ್ಯೂಸ್: ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ಈ ದಿನ ವಿಶೇಷ ಬಸ್

ಬೆಳಗಾವಿ: ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ಭಕ್ತರಿಗೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವಿಶೇಷ ಬಸ್ ವ್ಯವಸ್ಥೆ ಮಾಡಿದೆ.

ಭಕ್ತರ ಬೇಡಿಕೆ ಮೇರೆಗೆ ಛಟ್ಟಿ ಅಮವಾಸ್ಯೆಯವರೆಗೆ ಹುಬ್ಬಳ್ಳಿಯಿಂದ ಸವದತ್ತಿಗೆ ವಾರದಲ್ಲಿ ಎರಡು ದಿನ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಛಟ್ಟಿ ಅಮವಾಸ್ಯೆವರೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಹುಬ್ಬಳ್ಳಿಯಿಂದ ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ತೆರಳಲಿದೆ.

ಶೀಗಿ ಹುಣ್ಣಿಮೆ ಹಾಗೂ ದೀಪಾವಳಿ ಪ್ರಯುಕ್ತ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದರ್ಶನಕ್ಕೆ ತೆರಳಲು ಭಕ್ತರಿಗೆ ಕಲ್ಪಿಸಲಾಗಿದ್ದ ವಿಶೇಷ ನೇರ ಬಸ್ ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಇದೀಗ ಭಕ್ತರ ಕೋರಿಕೆ ಮೇರೆಗೆ ದೇವಿಯ ವಾರದ ನಿಮಿತ್ತ ನವೆಂಬರ್ 19ರಂದು ಮಂಗಳವಾರ 18 ವಿಶೇಷ ಹೆಚ್ಚುವರಿ ಬಸ್ ಓಡಿಸಲಾಗಿದೆ. ಇದೀಗ ಮುಂಬರುವ ಶುಕ್ರವಾರ ಹಾಗೂ ಮಂಗಳವಾರದಂದು ಸಹ ಹುಬ್ಬಳ್ಳಿಯಿಂದ ಯಲ್ಲಮ್ಮ ಗುಡ್ದಕ್ಕೆ ವಿಶೇಷ ಹೆಚ್ಚುವರಿ ನೇರ ಬಸ್ ಗಳು ಓಡಾಟ ನಡೆಸಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನವೆಂಬರ್ 22, 26 ಹಾಗೂ 29ರಂದು ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಿಂದ ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ನೇರ ಬಸ್ ಗಳು ಸಂಚರಿಸಲಿವೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತಣಾಧಿಕಾರಿ ರಾಮನಗೌಡರ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular