HomeHealthಸದಾ ಕನ್ನಡಕ ಧರಿಸುವ ಅಭ್ಯಾಸವಿದೆಯೇ ಹಾಗಾದರೆ ಎಚ್ಚರ ಕಣ್ಣಿನ ದೃಷ್ಟಿ ಮತ್ತಷ್ಟು ದುರ್ಬಲಗೊಳ್ಳಬಹುದು!

ಸದಾ ಕನ್ನಡಕ ಧರಿಸುವ ಅಭ್ಯಾಸವಿದೆಯೇ ಹಾಗಾದರೆ ಎಚ್ಚರ ಕಣ್ಣಿನ ದೃಷ್ಟಿ ಮತ್ತಷ್ಟು ದುರ್ಬಲಗೊಳ್ಳಬಹುದು!

ಇತ್ತೀಚಿನ ದಿನಗಳಲ್ಲಿ ಕಣ್ಣಿನ ದೃಷ್ಟಿ ದೋಷ ಸಾಮಾನ್ಯ ಸಮಸ್ಯೆಯಾಗಿದ್ದು ಲಕ್ಷಾಂತರ ಮಂದಿ ಪ್ರತಿದಿನ ಕನ್ನಡಕವನ್ನು ಅವಲಂಬಿಸಿದ್ದಾರೆ. ಕಣ್ಣಿನ ದೃಷ್ಟಿಯನ್ನು ಸರಿಪಡಿಸಲು ಮತ್ತು ದೈನಂದಿನ ಕೆಲಸಗಳನ್ನು ಸುಲಭವಾಗಿ ಮಾಡಲು ಕನ್ನಡಕ ಅತ್ಯಂತ ಮುಖ್ಯ ಸಾಧನವಾಗಿದೆ. ಆದರೆ ಅಗತ್ಯವಿರಲಿ ಇಲ್ಲದಿರಲಿ ದಿನದ ಬಹುಪಾಲು ಸಮಯದಲ್ಲಿ ಅಥವಾ ಇಡೀ ದಿನ ನಿರಂತರವಾಗಿ ಕನ್ನಡಕ ಧರಿಸುವುದರಿಂದ ಆರೋಗ್ಯದ ಮೇಲೆ ಕೆಲವು ದುಷ್ಪರಿಣಾಮಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ದಿನಪೂರ್ತಿ ಕನ್ನಡಕ ಧರಿಸುವುದರಿಂದ ಮೂಗಿನ ಮೇಲೆ ಹಾಗೂ ಕಿವಿಗಳ ಹಿಂದೆ ನಿರಂತರ ಒತ್ತಡ ಉಂಟಾಗಿ ಅಲ್ಲಿ ನೋವು ಅಥವಾ ಚರ್ಮದ ಬಣ್ಣ ಬದಲಾಗುವ ಸಮಸ್ಯೆ ಕಂಡುಬರುತ್ತದೆ. ಕೆಲವರಲ್ಲಿ ಭಾರವಾದ ಫ್ರೇಮ್ ಗಳ ಕಾರಣದಿಂದ ಮುಖದ ನಿರ್ದಿಷ್ಟ ಭಾಗಗಳಲ್ಲಿ ಕಿರಿಕಿರಿ ಉಂಟಾಗುತ್ತದೆ. ಇದರೊಂದಿಗೆ ನಿರಂತರವಾಗಿ ಕನ್ನಡಕ ಧರಿಸುವುದರಿಂದ ಕಣ್ಣಿನ ಸುತ್ತಲಿನ ಸ್ನಾಯುಗಳು ಕೇವಲ ಒಂದೇ ರೀತಿಯ ದೃಷ್ಟಿಗೆ ಒಗ್ಗಿಕೊಳ್ಳುತ್ತವೆ. ಇದರಿಂದ ಸ್ವಾಭಾವಿಕವಾಗಿ ಕಣ್ಣಿನ ದೃಷ್ಟಿ ಸಾಮರ್ಥ್ಯ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ನೇತ್ರ ತಜ್ಞರು ಅಭಿಪ್ರಾಯಪಡುತ್ತಾರೆ.

ಬೆಳಕಿನ ಪ್ರತಿಫಲನ ಮತ್ತು ಲೆನ್ಸ್ ನ ಅಡಚಣೆಯಿಂದಾಗಿ ಕೆಲವರಿಗೆ ತಲೆನೋವು, ತಲೆತಿರುಗುವಿಕೆ ಮತ್ತು ಕಣ್ಣಿನಲ್ಲಿ ಒಣಗಿದ ಅನುಭವವಾಗುತ್ತದೆ. ಕಂಪ್ಯೂಟರ್ ಅಥವಾ ಮೊಬೈಲ್ ಬಳಕೆ ಮಾಡುವಾಗ ಕನ್ನಡಕದೊಂದಿಗೆ ದೀರ್ಘಕಾಲ ಕಳೆಯುವುದರಿಂದ ಕಣ್ಣಿನ ಆಯಾಸ ಹೆಚ್ಚಾಗುತ್ತದೆ. ಆದ್ದರಿಂದ ದೃಷ್ಟಿ ದೋಷವಿದ್ದರೂ ವೈದ್ಯರ ಸಲಹೆಯಂತೆ ಅಗತ್ಯವಿದ್ದಾಗ ಮಾತ್ರ ಕನ್ನಡಕ ಧರಿಸುವುದು ಮತ್ತು ಆಗಾಗ್ಗೆ ಕಣ್ಣಿಗೆ ವಿಶ್ರಾಂತಿ ನೀಡುವುದು ಉತ್ತಮ ಅಭ್ಯಾಸವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular