ಬೆಂಗಳೂರು: ಬೆಳ್ಳಂಬೆಳಿಗ್ಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಾಲರ್ಸ್ ಕಾಲೋನಿಯ ಮನೆಯ ಮೇಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.
ಎರಡು ಕಾರುಗಳಲ್ಲಿ ಆಗಮಿಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಜೂನ್ 24ರಂದು ಸತೀಶ ಜಾರಕಿಹೊಳಿ ಭಾಮೈದ ಹಾಗೂ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ಸಂದರ್ಭದಲ್ಲಿ ಹಲವು ಅಧಿಕಾರಿಗಳ ಮನೆಗಳ ಮೇಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ಇದರ ಮುಂದುವರಿದ ಭಾಗವಾಗಿ ಸತೀಶ ಜಾರಕಿಹೊಳಿ ನಿವಾಸದ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.
ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ(PMLA), ಬೇನಾಮಿ ಆಸ್ತಿ ಗಳಿಕೆ ಹಾಗೂ ಹವಾಲಾ ದಂಧೆಗೆ ಸಂಬಂಧಿಸಿದಂತೆ ಈ ಹಿಂದೆ ಇಡಿ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದರು. ಬೆಳಗಾವಿಯ ಮಂಜುನಾಥ್ ಅವರ ನಿವಾಸ, ಬೆಂಗಳೂರಿನ ಅಪಾರ್ಟ್‌ಮೆಂಟ್ ಹಾಗೂ ಮೈಸೂರು ಮತ್ತು ಅರಸೀಕೆರೆಯಲ್ಲಿರುವ ಅವರ ಆಪ್ತರ ಕಚೇರಿಗಳು ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲಕ್ಕೆ ಪರಿಶೀಲನೆ ನಡೆಸಲಾಗಿತ್ತು. ಈ ತನಿಖೆಯ ವೇಳೆ ಇಡಿ ಅಧಿಕಾರಿಗಳು ಸುಮಾರು ₹13.3 ಕೋಟಿ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿದ್ದರು. ಇದರಲ್ಲಿ ₹5.5 ಕೋಟಿ ನಗದು ಮತ್ತು ₹7.8 ಕೋಟಿ ಮೌಲ್ಯದ ಚಿನ್ನಾಭರಣಗಳು ಸೇರಿದ್ದವು.
ರಾಜ್ಯ ಮಟ್ಟದ ಶೈಕ್ಷಣಿಕ ತರಬೇತಿ ಹಾಗೂ ಚಾರಣ ಶಿಬಿರ
ರಾಣೆಬೆನ್ನೂರು: ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಣೆಬೆನ್ನೂರಿನ ‘ಕೃಷ್ಣಮೃಗ ಘಟಕ’ವು ಸಾಹಸ ಹಾಗೂ ಪರಿಸರ ಪ್ರಿಯರಿಗಾಗಿ ‘ಬ್ಲ್ಯಾಕ್‌ಬಕ್’ ಹೆಸರಿನ 4 ದಿನಗಳ ರಾಜ್ಯ ಮಟ್ಟದ ಶೈಕ್ಷಣಿಕ ತರಬೇತಿ ಮತ್ತು ಚಾರಣ ಶಿಬಿರವನ್ನು ಆಯೋಜಿಸಿದೆ.
ಶಿಬಿರದ ಪ್ರಮುಖ ವಿವರಗಳು:
ದಿನಾಂಕ ಮತ್ತು ಅವಧಿ: 2026 ರ ಸೆಪ್ಟೆಂಬರ್ 25 ರಿಂದ ಸೆಪ್ಟೆಂಬರ್ 28 ರವರೆಗೆ (4 ದಿನಗಳು / 3 ರಾತ್ರಿಗಳು).
ಸ್ಥಳ: ರಾಣೆಬೆನ್ನೂರು ಹಾಗೂ ಸುತ್ತಮುತ್ತಲಿನ ಪರಿಸರ, ಹಾವೇರಿ ಜಿಲ್ಲೆ. ನೋಂದಣಿಗೆ ಕೊನೆಯ ದಿನಾಂಕ: 12 ಸೆಪ್ಟೆಂಬರ್, 2026, ಶಿಬಿರ ಶುಲ್ಕ: ಪ್ರತಿ ವ್ಯಕ್ತಿಗೆ ರೂ. 6500, (ಕ್ಯಾಂಪ್‌ನಲ್ಲಿ ವಾಸ್ತವ್ಯ, ಪೌಷ್ಟಿಕ ಸಸ್ಯಾಹಾರಿ ಊಟ, ಅರಣ್ಯ ಪ್ರವೇಶ ಮತ್ತು ಟ್ರೆಕ್ಕಿಂಗ್ ಶುಲ್ಕ, ಸ್ಥಳೀಯ ಸಾರಿಗೆ ಹಾಗೂ ಪರಿಣಿತ ಮಾರ್ಗದರ್ಶಕರ ವೆಚ್ಚ ಇದರಲ್ಲಿ ಸೇರಿದೆ).
ಚಾರಣದ ವಿವರ: ದಿನ 1 (25.09.2026): ರಾಣೆಬೆನ್ನೂರಿನ ಅಶೋಕ್ ನಗರದ ಮೇಡ್ಲೇರಿ ರಸ್ತೆಯಲ್ಲಿರುವ ‘ಓಂ ಆಸ್ಪತ್ರೆ’ ಬಳಿ ಸಂಜೆ 4:00 ರಿಂದ 6:00 ಗಂಟೆಯೊಳಗೆ ವರದಿ ಮಾಡಿಕೊಳ್ಳುವುದು. ನಂತರ ವಾಹನದ ಮೂಲಕ ಬೇಸ್‌ಕ್ಯಾಂಪ್‌ಗೆ ಕರೆದೊಯ್ಯಲಾಗುತ್ತದೆ.
ದಿನ 2 (26-09-2026): ಮಲ್ಲಯ್ಯನ ಬೆಟ್ಟಕ್ಕೆ 12 ಕಿ.ಮೀ. ಚಾರಣ, ಇರಾಣಿ ದೇವಸ್ಥಾನ ಹಾಗೂ ಕದರಮಂಡಲಗಿ ಭೇಟಿ. ದಿನ 3 (27-09-2026): ಕೃಷ್ಣಮೃಗ ಅಭಯಾರಣ್ಯ ಚೌಡಯ್ಯದಾನಪುರ ದೇವಸ್ಥಾನಕ್ಕೆ ಭೇಟಿ ಹಾಗೂ ದೇವರಗುಡ್ಡಕ್ಕೆ ಮೂನ್‌ಲೈಟ್ (ಬೆಳದಿಂಗಳ) ಚಾರಣ (ಒಟ್ಟು 18 ಕಿ.ಮೀ.).
ದಿನ 4 (28-09-2026): ವಿಶೇಷ ಕಾರ್ಯಕ್ರಮ, ಸಮಾರೋಪ ಸಮಾರಂಭ ಹಾಗೂ ಮಧ್ಯಾಹ್ನದ ಊಟದ ನಂತರ ಬೀಳ್ಕೊಡುಗೆ. ಆಸಕ್ತ ಪರಿಸರ ಮತ್ತು ಚಾರಣಾಸಕ್ತರು ತಕ್ಷಣವೇ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಹೆಚ್ಚಿನ ಮಾಹಿತಿ ಮತ್ತು ನೋಂದಣಿಗೆ ಸಂಪರ್ಕಿಸಿ: ಸಂಪರ್ಕ ವ್ಯಕ್ತಿಗಳು ಸಂಯೋಜಕರು: ಸುಧೀರ್ ಕುರುವತ್ತಿ: 94481 18237, ರೋಹಿತ್ ಅಗರ್ವಾಲ್: 94498 56960, ಶಿಲ್ಪಾ ಎಂ. ಸಾವ್ಕಾರ್: 98458 02364

