ಇಂಟೆಲ್ 18ಎ ತಂತ್ರಜ್ಞಾನದ ಆಧಾರದ ಮೇಲೆ ನಿರ್ಮಿಸಲಾದ ಇಂಟೆಲ್ ಕೋರ್ ಅಲ್ಟ್ರಾ ಸೀರೀಸ್ 3 ಪ್ರೊಸೆಸರ್, ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಮತ್ತು ಅತ್ಯಂತ ತೆಳುವಾದ ವಿನ್ಯಾಸವನ್ನು ಹೊಂದಿರುವ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಬುಕ್ 6 ಸರಣಿಯು, ಪರ್ಸನಲ್ ಕಂಪ್ಯೂಟರ್‌ಗಳು ಹೆಚ್ಚು ನಿರೀಕ್ಷೆ ಹೊಂದುವಂತೆ ಮಾಡಿದೆ.
ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಸಿಇಎಸ್ 2026 ಮೇಳದಲ್ಲಿ ಗ್ಯಾಲಕ್ಸಿ ಬುಕ್ 6 ಅಲ್ಟ್ರಾ, ಗ್ಯಾಲಕ್ಸಿ ಬುಕ್ 6 ಪ್ರೊ ಮತ್ತು ಗ್ಯಾಲಕ್ಸಿ ಬುಕ್ 6 ಅನ್ನು ಪರಿಚಯಿಸಿದೆ. ಇದುವರೆಗಿನ ಅತ್ಯಂತ ಸುಧಾರಿತ ಗ್ಯಾಲಕ್ಸಿ ಬುಕ್ ಸರಣಿಯಾದ ಈ ಸಾಧನಗಳು, ಅತ್ಯಂತ ನಿಖರವಾದ ಎಂಜಿನಿಯರಿಂಗ್ ಮತ್ತು ತೆಳುವಾದ ವಿನ್ಯಾಸ ಹೊಂದಿವೆ ಮತ್ತು ಎಐ-ಚಾಲಿತ ವೇಗದ, ಶಕ್ತಿಯುತ ಕಾರ್ಯಕ್ಷಮತೆಯನ್ನು ಹೊಂದಿವೆ.
ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಮೊಬೈಲ್ ಎಕ್ಸ್ ಪೀರಿಯನ್ಸ್ (ಎಂಎಕ್ಸ್) ವಿಭಾಗದ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ವೋನ್-ಜೂನ್ ಚೋಯ್, “ಸ್ಯಾಮ್‌ಸಂಗ್‌ನಲ್ಲಿ, ನಾವು ಮೂಲಭೂತ ಅಂಶಗಳನ್ನು ಸರಿಯಾಗಿ ರೂಪಿಸುವುದೇ ನಿಜವಾದ ಹೊಸತನ ಎಂದು ನಂಬುತ್ತೇವೆ. ಕಾರ್ಯಕ್ಷಮತೆಯೇ ಕಂಪ್ಯೂಟರ್ ಬಳಕೆಯ ಅನುಭವವನ್ನು ನಿರ್ಧರಿಸುತ್ತದೆ” ಎಂದರು.
“ಗ್ಯಾಲಕ್ಸಿ ಬುಕ್ 6 ಸರಣಿಯೊಂದಿಗೆ ನಾವು ಸ್ಯಾಮ್‌ಸಂಗ್‌ನಿಂದ ಬಳಕೆದಾರರು ನಿರೀಕ್ಷಿಸುವ ಅಸಾಧಾರಣ ಉತ್ಪಾದಕತೆ ಮತ್ತು ಸೃಜನಶೀಲ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ವೇಗ ಮತ್ತು ಶಕ್ತಿಯನ್ನು ಎಐ ತಂತ್ರಜ್ಞಾನದೊಂದಿಗೆ ಸಂಯೋಜಿಸಿದ್ದೇವೆ” ಎಂದು ಹೇಳಿದರು.
ಅದ್ಭುತ ಕಾರ್ಯಕ್ಷಮತೆಗಾಗಿ ಎಂಜಿನಿಯರಿಂಗ್ ಅತ್ಯಾಧುನಿಕ ಹಾರ್ಡ್‌ವೇರ್ ಅನ್ನು ಅದ್ಭುತ ದೃಶ್ಯ ವೈಭವ ಮತ್ತು ಆಡಿಯೋ ಗುಣಮಟ್ಟದೊಂದಿಗೆ ಸಂಯೋಜಿಸಿರುವ ಗ್ಯಾಲಕ್ಸಿ ಬುಕ್ 6 ಸರಣಿಯು, ಸ್ಯಾಮ್‌ಸಂಗ್‌ನ ಇದುವರೆಗಿನ ಅತ್ಯಂತ ಸುಧಾರಿತ ಕಂಪ್ಯೂಟರ್ ಕಾರ್ಯಕ್ಷಮತೆಯನ್ನು ನೀಡುತ್ತದೆ.
ಇಂಟೆಲ್ 18ಎ ಮೇಲೆ ನಿರ್ಮಿಸಲಾದ ಮೊದಲ ಸಿಸ್ಟಮ್-ಆನ್-ಚಿಪ್ಸ್ ಆದ ಇಂಟೆಲ್ ಕೋರ್ ಅಲ್ಟ್ರಾ ಸರಣಿ 3 ಪ್ರೊಸೆಸರ್‌ಗಳ ಮೂಲಕ ಕಾರ್ಯನಿರ್ವಹಿಸುವ ಗ್ಯಾಲಕ್ಸಿ ಬುಕ್ 6, ಅತಿ ವೇಗದ ಸಿಪಿಯು, ಜಿಪಿಯು ಮತ್ತು ಎನ್ ಪಿ ಯು ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಇದು ಮಿಂಚಿನ ವೇಗದ ಪ್ರೊಸೆಸಿಂಗ್, ತಡೆರಹಿತ ಮಲ್ಟಿ-ಟಾಸ್ಕಿಂಗ್ ಮತ್ತು ಹೆಚ್ಚು ಸ್ಪಂದಿಸುವ ಎಐ ಸಾಮರ್ಥ್ಯವನ್ನು ಒದಗಿಸುತ್ತದೆ.
ಇತ್ತೀಚಿನ NVIDIA GeForce RTX 5070/5060 ಲ್ಯಾಪ್‌ಟಾಪ್ ಜಿಪಿಯು ಅನ್ನು ಹೊಂದಿರುವ ಗ್ಯಾಲಕ್ಸಿ ಬುಕ್ 6 ಅಲ್ಟ್ರಾ, ಅತಿ ವೇಗದ ಎಐ ಚಿತ್ರ ತಯಾರಿಕೆ, ಸುಗಮ ವಿಡಿಯೋ ಪ್ಲೇಬ್ಯಾಕ್ ಮತ್ತು ಎಡಿಟಿಂಗ್ ಹಾಗೂ ಅತ್ಯಂತ ಸೊಗಸಾದ ಗೇಮಿಂಗ್ ಅನುಭವ ಒದಗಿಸುತ್ತದೆ. ಕಾರ್ಯಕ್ಷಮತೆಯನ್ನು ಗರಿಷ್ಠಗೊಳಿಸಲು, ಶಕ್ತಿಯುತ ಹಾರ್ಡ್‌ವೇರ್‌ಗೆ ಅಷ್ಟೇ ಸುಧಾರಿತ ಕೂಲಿಂಗ್ ವ್ಯವಸ್ಥೆಯ ಬೆಂಬಲ ಇರಬೇಕು.
ಸ್ಯಾಮ್‌ಸಂಗ್ ಯಾವುದೇ ಹೆಚ್ಚಿನ ಶಬ್ದವಿಲ್ಲದೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ವಿಶಿಷ್ಟ ಕೂಲಿಂಗ್ ವಿನ್ಯಾಸವನ್ನು ರೂಪಿಸಿದೆ. ಹೊಸದಾಗಿ ಸುಧಾರಿಸಲಾದ ‘ವೇಪರ್ ಚೇಂಬರ್’ ಮತ್ತು ಗಾಳಿಯ ಹರಿವಿನ ವ್ಯವಸ್ಥೆಯು ಶಾಖವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಅಲ್ಟ್ರಾ ಮತ್ತು ಪ್ರೊ ಮಾದರಿಗಳಲ್ಲಿ ಇದು ಲಭ್ಯವಿದ್ದು, ‘ಪ್ರೊ’ ಸರಣಿಯಲ್ಲಿ ವೇಪರ್ ಚೇಂಬರ್ ಬಳಸಿರುವುದು ಇದೇ ಮೊದಲು.
ಸ್ಲಿಮ್ ಮತ್ತು ಸಮತೋಲಿತ ವಿನ್ಯಾಸ ಸ್ಯಾಮ್‌ಸಂಗ್‌ನ ಹಾರ್ಡ್‌ವೇರ್ ಪರಂಪರೆಯು ಅದರ ಕಲಾತ್ಮಕ ವಿನ್ಯಾಸದಲ್ಲಿ ಕಾಣಿಸುತ್ತದೆ. ಕಾರ್ಯಕ್ಷಮತೆಯನ್ನು ಅಷ್ಟೇ ಗುಣಮಟ್ಟದ ಕುಶಲತೆಯೊಂದಿಗೆ ಸಂಯೋಜಿಸಿ, ದಿನನಿತ್ಯದ ಎಲ್ಲಾ ಕೆಲಸಗಳಿಗೆ ಹೊಂದುವಂತಹ ಪ್ರೀಮಿಯಂ ಮತ್ತು ತೆಳುವಾದ ಕಂಪ್ಯೂಟರ್‌ಗಳನ್ನು ತಯಾರಿಸಲಾಗಿದೆ.
ಗ್ಯಾಲಕ್ಸಿ ಎಐ ಮೂಲಕ ದಿನವಿಡೀ ಉತ್ಪಾದಕತೆ ಮತ್ತು ಸಂಪರ್ಕ ಎಐ ಮೂಲಕ ದಿನವಿಡೀ ಕೆಲಸ ಮಾಡಲು ಬೇಕಾದ ವೇಗ, ಸ್ಥಿರತೆ ಮತ್ತು ನಿರಂತರ ಕಾರ್ಯಕ್ಷಮತೆಯ ಅಗತ್ಯವಿದೆ. ಗ್ಯಾಲಕ್ಸಿ ಬುಕ್ 6 ಶಕ್ತಿಯುತ ಕಂಪ್ಯೂಟಿಂಗ್ ಅನ್ನು ‘ಗ್ಯಾಲಕ್ಸಿ ಎಐ’ ನೊಂದಿಗೆ ಸಂಯೋಜಿಸಿ, ಡಿವೈಸ್ ಮತ್ತು ಕ್ಲೌಡ್ ಆಧಾರಿತ ಬುದ್ಧಿವಂತಿಕೆಯನ್ನು ಒದಗಿಸುತ್ತದೆ. ಇದರ ಫಲವಾಗಿ, ಬೆಳಿಗ್ಗೆಯಿಂದ ರಾತ್ರಿಯವರೆಗೆ ಅತ್ಯಂತ ವೇಗವಾಗಿ ಮತ್ತು ನಂಬಿಕಸ್ತವಾಗಿ ಕೆಲಸ ಮಾಡುವ ಸ್ಮಾರ್ಟ್ ಪರಿಕರಗಳು ಬಳಕೆದಾರರಿಗೆ ಲಭ್ಯವಾಗುತ್ತವೆ.
ಗುಣಮಟ್ಟ ಮತ್ತು ಕಾಳಜಿಯೊಂದಿಗೆ ಸುಧಾರಿತ ಭದ್ರತೆ ಗ್ಯಾಲಕ್ಸಿ ಬುಕ್ 6 ಸರಣಿಯು ದೀರ್ಘಕಾಲದ ವಿಶ್ವಾಸಾರ್ಹತೆಯ ಬದ್ಧತೆಯನ್ನು ಹೊಂದಿದೆ. Samsung Knox ಹಾರ್ಡ್‌ವೇರ್ ಆಧಾರಿತ ಬಹು-ಪದರದ ಭದ್ರತೆಯನ್ನು ಒದಗಿಸುವ ಮೂಲಕ ಸೈಬರ್ ದಾಳಿಗಳನ್ನು ತಡೆಯುತ್ತದೆ ಮತ್ತು ಡೇಟಾವನ್ನು ರಕ್ಷಿಸುತ್ತದೆ. ಜೊತೆಗೆ Windows 11ನ ಭದ್ರತಾ ವೈಶಿಷ್ಟ್ಯಗಳು ಹೆಚ್ಚಿನ ರಕ್ಷಣೆಯನ್ನು ನೀಡುತ್ತವೆ.
ಪ್ರತಿಯೊಂದು ಗ್ಯಾಲಕ್ಸಿ ಬುಕ್ 6 ಅನ್ನು ಸ್ಯಾಮ್‌ಸಂಗ್‌ನ ಅತ್ಯುನ್ನತ ಗುಣಮಟ್ಟಕ್ಕೆ ತಕ್ಕಂತೆ ಕಟ್ಟುನಿಟ್ಟಿನ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಹೆಚ್ಚಿನ ನೆಮ್ಮದಿಗಾಗಿ, Samsung Care+ ಮೂಲಕ ಆಕಸ್ಮಿಕ ಹಾನಿ, ದುರಸ್ತಿ ಮತ್ತು ಬದಲಾವಣೆಗಳಿಗೆ ಸಂಪೂರ್ಣ ರಕ್ಷಣೆಯನ್ನು ನೀಡಲಾಗುತ್ತದೆ.
ಗ್ಯಾಲಕ್ಸಿ ಬುಕ್ 6 ಅಲ್ಟ್ರಾ, ಪ್ರೊ ಮತ್ತು ಸಾಮಾನ್ಯ ಮಾದರಿಗಳು ಗ್ರೇ ಅಥವಾ ಸಿಲ್ವರ್ ಬಣ್ಣಗಳಲ್ಲಿ ಜನವರಿ 2026ರ ಕೊನೆಯಿಂದ ಆಯ್ದ ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತವೆ. ಹೆಚ್ಚುವರಿಯಾಗಿ, ಮ್ಯಾನೇಜ್ಡ್ ಐಟಿ ವಿಭಾಗಕ್ಕಾಗಿ ಸಿದ್ಧಪಡಿಸಲಾದ ಗ್ಯಾಲಕ್ಸಿ ಬುಕ್ 6 ಎಂಟರ್‌ಪ್ರೈಸ್ ಎಡಿಷನ್ ಏಪ್ರಿಲ್ 2026 ರಿಂದ ಕೆಲವು ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ.

