ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಎಂ. ಶಾಮನೂರು ಬರಿಗಾಲಿನಲ್ಲಿ ಪ್ರಚಾರ ಕೈಗೊಂಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಜ್ಜ ದಿ. ಶಾಮನೂರು ಶಿವಶಂಕರಪ್ಪ, ತಂದೆ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ತಾಯಿ ಡಾ. ಪ್ರಭಾ ಮಲ್ಲಿಕಾರ್ಜುನ ಪರವಾಗಿ ಬರಿಗಾಲಿನಲ್ಲಿ ಪ್ರಚಾರ ಕೈಗೊಂಡಿದ್ದ ಸಮರ್ಥ್ ಶಾಮನೂರು ಈಗ ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.
ತಮ್ಮ ನಂಬಿಕೆಯಂತೆ ಭಾನುವಾರ ಬೆಳಗ್ಗೆಯಿಂದ ಬರಿಗಾಲಿನಲ್ಲಿಯೇ ಪ್ರಚಾರ ನಡೆಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಕುರುಬರ ಕೇರಿಯಲ್ಲಿ ಕಾಂಗ್ರೆಸ್ ಮುಖಂಡರ ಜೊತೆಗೆ ತೆರಳಿ ಮತಯಾಚಿಸಿದ್ದಾರೆ. ಸಮಾಜದ ಮುಖಂಡರು, ಪಕ್ಷದ ಮುಖಂಡರು ಹಾರ ಹಾಕಿ ಅವರನ್ನು ಸನ್ಮಾನಿಸಿದ್ದಾರೆ. ಅಭ್ಯರ್ಥಿಯಾಗುವ ಮೊದಲಿನಿಂದಲೂ ಎಲ್ಲರೂ ತಮ್ಮ ಮನೆಗೆ ಮಗ ಎಂದು ನನ್ನನ್ನು ಒಪ್ಪಿಕೊಂಡಿದ್ದಾರೆ. ಅವರೂ ಖುಷಿಯಿಂದ ಪ್ರಚಾರ ನಡೆಸುತ್ತಿದ್ದಾರೆ ಎಂದು ಸಮರ್ಥ್ ತಿಳಿಸಿದ್ದಾರೆ.

