HomeCrime'ಮಸಾಜ್' ಮಾಡುವಾಗ ಎಂಜಲು ಬಳಸಿದ ಕ್ಷೌರಿಕ; ಆಘಾತಕಾರಿ ವಿಡಿಯೋ ವೈರಲ್....!

‘ಮಸಾಜ್’ ಮಾಡುವಾಗ ಎಂಜಲು ಬಳಸಿದ ಕ್ಷೌರಿಕ; ಆಘಾತಕಾರಿ ವಿಡಿಯೋ ವೈರಲ್….!

ಉತ್ತರಪ್ರದೇಶದ ಕನೌಜ್‌ನಿಂದ ನಾಚಿಕೆಗೇಡಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ತಾಲ್ಗ್ರಾಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಕ್ಷೌರಿಕನೊಬ್ಬ ಮಸಾಜ್ ಮಾಡುವಾಗ ಎಂಜಲು ಬಳಸಿದ ಆರೋಪ ಕೇಳಿ ಬಂದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗುತ್ತಿದೆ.

ವೈರಲ್‌ ವಿಡಿಯೋದಲ್ಲಿ ಕ್ಷೌರಿಕ, ಗ್ರಾಹಕನ ಮುಖಕ್ಕೆ ಮಸಾಜ್ ಮಾಡುತ್ತಿದ್ದಾನೆ. ಈ ಸಮಯದಲ್ಲಿ, ಅವನು ತನ್ನ ಕೈಯಲ್ಲಿ ಎರಡು ಬಾರಿ ಎಂಜಲು ಹಾಕುತ್ತಾನೆ. ಅದೇ ಕೈಯಿಂದ ಮಸಾಜ್‌ ಮಾಡುತ್ತಾನೆ. ಈ ಸಮಯದಲ್ಲಿ  ಕಣ್ಣು ಮುಚ್ಚಿದ್ದರಿಂದ ಗ್ರಾಹಕರಿಗೆ ಅದು ತಿಳಿಯುವುದಿಲ್ಲ.

ಎಕ್ಸ್‌ ಖಾತೆಯಲ್ಲಿ ಈ ವಿಡಿಯೋ ವೈರಲ್‌ ಆಗ್ತಿದ್ದಂತೆ ಕನೌಜ್ ಪೊಲೀಸರು  ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ತಾಳಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಕನೌಜ್ ಪೊಲೀಸರು ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular