HomeEntertainmentಸಲ್ಮಾನ್ ಖಾನ್ ತಂಗಿ ಮನೆಯಲ್ಲಿ ವಜ್ರದ ಓಲೆ ಕಳವು; ಮನೆಯೊಳಗೇ ಇದ್ದ ಕಳ್ಳ ಅಂದರ್

ಸಲ್ಮಾನ್ ಖಾನ್ ತಂಗಿ ಮನೆಯಲ್ಲಿ ವಜ್ರದ ಓಲೆ ಕಳವು; ಮನೆಯೊಳಗೇ ಇದ್ದ ಕಳ್ಳ ಅಂದರ್

ನಟ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಅವರ ಮನೆಯಲ್ಲಿ ವಜ್ರದ ಕಿವಿಯೋಲೆಗಳು ಕಳುವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಮುಂಬೈನ ಖಾರ್ ನಲ್ಲಿರುವ ಅವರ ಮನೆಯಲ್ಲಿ ಕಿವಿಯೋಲೆಗಳನ್ನು ಕದ್ದಿದ್ದಕ್ಕಾಗಿ 30 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ವಿಲೆ ಪಾರ್ಲೆ ಪೂರ್ವದ ಅಂಬೇವಾಡಿ ಕೊಳೆಗೇರಿ ನಿವಾಸಿ ಸಂದೀಪ್ ಹೆಗ್ಡೆ ಎಂದು ಗುರುತಿಸಲಾಗಿದೆ. ಆತ ಅರ್ಪಿತಾ ಖಾನ್ ಶರ್ಮಾ ಅವರ ಮನೆಯಲ್ಲಿ ಗೃಹ ಸಿಬ್ಬಂದಿಯಾಗಿ (ಹೌಸ್ ಕೀಪಿಂಗ್) ಕೆಲಸ ಮಾಡುತ್ತಿದ್ದ.

ಮೇಕಪ್ ಟ್ರೇನಲ್ಲಿ ಇಟ್ಟಿದ್ದ ತನ್ನ ಐದು ಲಕ್ಷ ಮೌಲ್ಯದ ವಜ್ರದ ಕಿವಿಯೋಲೆಗಳು ನಾಪತ್ತೆಯಾಗಿವೆ ಎಂದು ಅರ್ಪಿತಾ ದೂರು ನೀಡಿದ್ದರು. ಮೇ 16ರಂದು ಘಟನೆ ನಡೆದಿದ್ದು ಅದೇ ರಾತ್ರಿ ಆರೋಪಿಯನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳ್ಳತನ ಮಾಡಿ ಓಡಿಹೋಗಿದ್ದ ಆರೋಪಿಯ ಮನೆಯಿಂದ ಓಲೆ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಸಂದೀಪ್ ಹೆಗ್ಡೆಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 381 (ಸೇವಕನಿಂದ ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular