HomeCrimeತನ್ನ ಮೂರನೇ ಪತ್ನಿಗಾಗಿ ಸ್ವಂತ ಮಗನನ್ನೇ ಹತ್ಯೆ ಮಾಡಿದ ತಂದೆ

ತನ್ನ ಮೂರನೇ ಪತ್ನಿಗಾಗಿ ಸ್ವಂತ ಮಗನನ್ನೇ ಹತ್ಯೆ ಮಾಡಿದ ತಂದೆ

ತನ್ನ ಮೂರನೇ ಹೆಂಡತಿಗೆ ಇಷ್ಟವಾಗದ ತನ್ನ ಮಗನನ್ನೇ ತಂದೆ ಸಾಯಿಸಿರೋ ಅಮಾನವೀಯ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಏಳು ವರ್ಷದ ಬಾಲಕನನ್ನು ತಂದೆಯೇ ಆತನ ಮೂರನೇ ಹೆಂಡತಿಯ ಒತ್ತಡದ ಕಾರಣದಿಂದ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಪ್ರತೀಕ್ 3 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಸಾಮಾನ್ಯವಾಗಿ ತನ್ನ ಅಜ್ಜಿಯೊಂದಿಗೆ ಮಲಗಿದ್ದನು. ಆದರೆ ಅವನ 26 ವರ್ಷದ ತಂದೆ ಶಶಿಪಾಲ್ ಮುಂಡೆ, ಕೂಲರ್ ಹೊಂದಿರುವ ತನ್ನ ಕೋಣೆಯಲ್ಲಿ ಮಲಗುವಂತೆ ಬಾ ಎಂದು ಹೇಳಿ ಮಗನನ್ನು ಕರೆದುಕೊಂಡು ಹೋಗಿದ್ದನು. ಕೂಲರ್ ಬಗ್ಗೆ ಉತ್ಸುಕನಾಗಿದ್ದ ಹುಡುಗ, ತನ್ನ ತಂದೆಯ ಕೋಣೆಗೆ ಹೋಗುವುದಾಗಿ ತನ್ನ ಅಜ್ಜಿಗೆ ಹೇಳಿ ಹೋಗಿದ್ದನು. ಆದರೆ ಅದೇ ಅವನ ಬದುಕಿನ ಕೊನೆಯ ಕ್ಷಣವಾಗಿತ್ತು.

ಪೊಲೀಸರ ಪ್ರಕಾರ, ಮಗ ಮಲಗಿದ್ದಾಗ ಶಶಿಪಾಲ್ ಮುಂಡೆ ಟಿವಿ ವಾಲ್ಯೂಮ್ ಹೆಚ್ಚಿಸಿ ಕತ್ತು ಹಿಸುಕಿದ್ದಾನೆ. ಈ ವೇಳೆ ಆತ ತನ್ನ ಮೂರನೇ ಪತ್ನಿಗೆ ವಿಡಿಯೋಕಾಲ್ ಮಾಡಿ ತಾನು ಮಗನನ್ನು ಸಾಯಿಸಿರುವುದಾಗಿ ಸಾಕ್ಷಿ ತೋರಿಸಲು ಮುಂದಾಗಿದ್ದ. ಆಕೆ ಫೋನ್ ಕರೆ ಸ್ವೀಕರಿಸಿದಿದ್ದಾಗ ತನ್ನ ಚಿಕ್ಕ ಮಗನನ್ನು ಕೊಂದ ನಂತರ, ಶಶಿಪಾಲ್ ತನ್ನ ಮೂರನೇ ಹೆಂಡತಿ ಪಾಯಲ್‌ಗೆ ವಾಟ್ಸಾಪ್‌ನಲ್ಲಿ ಪುರಾವೆಯಾಗಿ ವೀಡಿಯೊವನ್ನು ಹಂಚಿಕೊಂಡಿದ್ದ. ಆದರೆ ಆಕೆ ಗಂಡನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರಿಂದ ಅವಳು ವಿಡಿಯೋ ನೋಡಿರಲಿಲ್ಲ. ಘಟನೆ ಬಳಿಕ ಆರೋಪಿ ಶಶಿಪಾಲ್ ಓಡಿ ಹೋಗಿದ್ದ. ಶಶಿಪಾಲ್ ಮತ್ತು ಪಾಯಲ್ (23) ಇಬ್ಬರನ್ನೂ ಪೊಲೀಸರು ನಂತರ ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಾಯಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದು ತವರು ಮನೆಗೆ ಹೋಗಿದ್ದಳು. ತನ್ನ ಪತಿಯ ಹಿಂದಿನ ಮದುವೆಯಿಂದ ಹುಟ್ಟಿದ್ದ ಮಗ ಪ್ರತೀಕ್‌ನನ್ನು ಸಾಯಿಸದ ಹೊರತು ಅವಳು ತನ್ನ ಪೋಷಕರ ಮನೆಯಿಂದ ಹಿಂತಿರುಗುವುದಿಲ್ಲ ಎಂದು ಶಶಿಪಾಲ್‌ಗೆ ಹೇಳಿದ್ದಾಗಿ ಆರೋಪಿ ಮಾಧ್ಯಮಗಳ ಮುಂದೆ ಹೇಳಿದ್ದ.
ಶಶಿಪಾಲ್ ಮುಂಡೆ ಅವರ ಮೂರನೇ ಹೆಂಡತಿ ಮೊದಲಿನಿಂದಲೂ ಹುಡುಗನ ಬಗ್ಗೆ ತುಂಬಾ ಅಸಮಾಧಾನ ಹೊಂದಿದ್ದರು. ಅವರು ಈ ವಿಷಯದ ಬಗ್ಗೆ ಆಗಾಗ್ಗೆ ಜಗಳವಾಡುತ್ತಿದ್ದರು. ಪಾಯಲ್ ತನ್ನ ಪತಿಗೆ ತನ್ನ ಮಗನನ್ನು ಕಳುಹಿಸಿದರೆ ಅಥವಾ ಅವನನ್ನು ಕೊಂದರೆ ಮಾತ್ರ ತಾನು ಹಿಂತಿರುಗುತ್ತೇನೆ ಎಂದು ಹೇಳಿದ್ದರು ಎಂದು ಪೊಲೀಸ್ ಅಧಿಕಾರಿ ಜೈವೀರ್ ಸಿಂಗ್ ಭಡೋರಿಯಾ ಹೇಳಿದ್ದಾರೆ.

ಶಶಿಪಾಲ್ ಮುಂಡೆ ಅವರ ಮೊಬೈಲ್‌ನಲ್ಲಿ ಕೊಲೆಯ ವಿಡಿಯೋ ಕ್ಲಿಪ್ ಪತ್ತೆಯಾಗಿದೆ.

ತನಗೂ ಅಪರಾಧಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪಾಯಲ್ ಹೇಳಿದ್ದಾರೆ. ನನ್ನ ಪತಿಗೆ ತನ್ನ ಏಳು ವರ್ಷದ ಮಗನನ್ನು ಸಾಯಿಸುವಂತೆ ನಾನು ಯಾವತ್ತೂ ಹೇಳಿಲ್ಲ ಎಂದು ಮಾಧ್ಯಮದವರ ಮುಂದೆ ಹೇಳಿದ್ದಾಳೆ.

For Latest News Updates, Join Our Whatsapp Community🚩
RELATED ARTICLES

Most Popular