ಮಡಿಕೇರಿ : ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆಯುವ ಹನುಮ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅಬಕಾರಿ ಕಾಯ್ದೆ 1965 ರ ಕಲಂ 21 ರಲ್ಲಿ ದತ್ತವಾಗಿರುವ ಅಧಿಕಾರದಂತೆ ಏಪ್ರಿಲ್, 02 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯ ರಾತ್ರಿ 12 ಗಂಟೆಯವರೆಗೆ ವಿರಾಜಪೇಟೆ ನಗರ ಮತ್ತು ಸುತ್ತಮುತ್ತಲಿನ 1 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ಹೋಟೆಲ್ ಮತ್ತು ಕ್ಲಬ್‍ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದೇಶಿಸಿದ್ದಾರೆ.
ಸಾರ್ವಜನಿಕರ ಗಮನಕ್ಕೆ
ಮಡಿಕೇರಿ : ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ಜಮೀನು ಖರೀದಿಸಿ ಫಲಾಪೇಕ್ಷಿಗಳಿಗೆ ನೀಡುವ ಯೋಜನೆಯಡಿ ಕೆ.ಆರ್.ರಾಜಮ್ಮ ಕೋಂ ಪೌತಿ ಕೆ.ಎಸ್.ರಾಜು, ಕುಂದಳ್ಳಿ ಗ್ರಾಮ, ಶಾಂತಳ್ಳಿ ಹೋಬಳಿ, ಸೋಮವಾರಪೇಟೆ ತಾಲ್ಲೂಕು, ಕುಂದಳ್ಳಿ ಗ್ರಾಮದ ಭೂ ಮಾಲೀಕರುಗಳು ತಮ್ಮ ಜಮೀನು ಸರ್ವೆ ನಂ.1/177 ವಿಸ್ತೀರ್ಣ 1.50 ಎಕರೆ ಜಮೀನನ್ನು ಅರ್ಹ ಮಹಿಳಾ ಫಲಾನುಭವಿಗಳಿಗೆ ಮಾರಾಟ ಮಾಡಲು ಬಯಸಿದ್ದು, ಈ ಭೂ ಮಾಲೀಕರ ಹಾಗೂ ಫಲಾನುಭವಿಗಳ ಬಗ್ಗೆ ಯಾರಿಗಾದರೂ ಯಾವುದೇ ರೀತಿಯ ತಂಟೆ ತಕರಾರು/ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಈ ಪ್ರಕಟಣೆ ಪ್ರಕಟಗೊಂಡ 07 ದಿನದೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಡಿಕೇರಿ ಕೊಡಗು ಜಿಲ್ಲಾ ಕಚೇರಿಗೆ ಸಲ್ಲಿಸುವಂತೆ ಸೂಚಿಸಿದೆ.
ತಪ್ಪಿದ್ದಲ್ಲಿ ಕೆ.ಆರ್.ರಾಜಮ್ಮ ಕೋಂ ಪೌತಿ ಕೆ.ಎಸ್.ರಾಜು, ಕುಂದಳ್ಳಿ ಗ್ರಾಮ, ಶಾಂತಳ್ಳಿ ಹೋಬಳಿ, ಸೋಮವಾರಪೇಟೆ ತಾಲ್ಲೂಕು ಈ ಭೂ ಮಾಲೀಕರಿಗೆ ಸೇರಿದ ಜಮೀನನ್ನು ನಿಗಮದ ಭೂ ಒಡೆತನ ಯೋಜನೆಯಡಿ ನಮೂದಿಸಿರುವ ಫಲಾಪೇಕ್ಷಿಗಳಿಗೆ ಖರೀದಿಸಲು ಯಾವುದೇ ರೀತಿಯ ತಂಟೆ-ತಕರಾರು/ ಆಕ್ಷೇಪಣೆಗಳು ಇಲ್ಲವೆಂದು ಪರಿಗಣಿಸಿ ಜಮೀನು ಖರೀದಿಸಿ ನೋಂದಣಿ ಮಾಡಿಸಿಕೊಡಲಾಗುವುದು. ಜಮೀನು ನೋಂದಣಿ ಮಾಡಿಸಿದ ನಂತರದ ದಿನಗಳಲ್ಲಿ ಯಾರಾದರೂ ತಕರಾರು ಸಲ್ಲಿಸಿದ್ದಲ್ಲಿ ಅದು ಊರ್ಜಿತವಾಗುವುದಿಲ್ಲ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

