
* ಜೀರ್ಣಶಕ್ತಿಯನ್ನು ವೃದ್ಧಿ ಮಾಡುತ್ತದೆ. ಆಹಾರವನ್ನು ತೆಗೆದುಕೊಳ್ಳಬೇಕು ಎಂಬ ಕೋರಿಕೆಯನ್ನು ಹೆಚ್ಚಿಸುತ್ತದೆ. ದೇಹದ ಎಲ್ಲಾ ಭಾಗಗಳಿಗೆ ರಕ್ತ ಪರಿಚಲನೆ ಆಗುವಂತೆ ಮಾಡುತ್ತದೆ. ಅದಕ್ಕೆ ಇದನ್ನು ಲಿವರ್, ಮೂತ್ರಪಿಂಡ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುತ್ತದೆ.
* ಕುಂಕುಮ ಹೂವು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು, ಟ್ರೈಗ್ಲಿಸರೈಡ್ ಅನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಹೃದ್ರೋಗ ಇರುವವರು ನಿತ್ಯವೂ ಎರಡು ಮೂರು ಎಸಳು ನೀರಲ್ಲಾಗಲಿ, ಹಾಲಲ್ಲಾಗಲಿ ನೆನೆಸಿಟ್ಟು ಸೇವಿಸುವುದು ಒಳ್ಳೆಯದು.
* ಚರ್ಮವನ್ನು ಕಾಂತಿಯುತವಾಗಿ ಮಾಡುವ ಗುಣ ಹೊಂದಿದೆ. ಆದ್ದರಿಂದ ಸೌಂದರ್ಯ ಸಾಧನಗಳ ತಯಾರಿಕೆಯಲ್ಲಿ ಕುಂಕುಮ ಹೂವನ್ನು ಬಳಸಲಾಗುತ್ತದೆ. ಒಂದು ಟೀ ಸ್ಪೂನ್ ಹಾಲಿಗೆ ಒಂದು ಎಸಳು ಕುಂಕುಮ ಹೂ ನೆನೆಸಿಟ್ಟು ಆ ಮಿಶ್ರಣವನ್ನು ಮುಖಕ್ಕೆ ಹಚ್ಚುತ್ತಿದ್ದರೆ, ಮುಖದ ಮೇಲಿನ ಮಚ್ಚೆಗಳು ತೊಲಗುತ್ತವೆ.
* ಗರ್ಭಿಣಿಯರು ಕುಂಕುಮ ಹೂ ಬೆರೆಸಿದ ಹಾಲನ್ನು ಕುಡಿಯುತ್ತಿದ್ದರೆ ಜೀವ ಕ್ರಿಯೆಗಳಿಗೆ ತಕ್ಕದಾದ ಉಷ್ಣ ಶಕ್ತಿ ಉತ್ಪತ್ತಿಯಾಗುತ್ತದೆ.

