ಬೆಂಗಳೂರು: ಯುಗಾದಿ ಹಬ್ಬದ ಮರುದಿನ ಮಾರ್ಚ್ 20ರಂದು ಹೊಸ ತೊಡಕು ದಿನ 6ರಿಂದ 9ನೇ ತರಗತಿಗೆ ನಿಗದಿ ಮಾಡಿದ್ದ ದ್ವಿತೀಯ ಸಂಕಲನಾತ್ಮಕ ಮೌಲ್ಯಾಂಕನ(ಎಸ್ಎ-2) ಪರೀಕ್ಷೆ ದಿನಾಂಕವನ್ನು ಮಾರ್ಚ್ 24ಕ್ಕೆ ಮರು ನಿಗದಿಪಡಿಸಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.
ಮಾರ್ಚ್ 20ರಂದು ನಡೆಯಬೇಕಿದ್ದ ಕನ್ನಡ ಪರೀಕ್ಷೆಯನ್ನು ಮಾರ್ಚ್ 24ರಂದು ನಡೆಸಲಾಗುವುದು ಎಂದು ಇಲಾಖೆಯ ನಿರ್ದೇಶಕ ಗೋಪಾಲಕೃಷ್ಣ ತಿಳಿಸಿದ್ದಾರೆ. ಯುಗಾದಿ ಹಬ್ಬದ ಮರುದಿನ ಹೊಸ ತೊಡಕಿನ ಹಬ್ಬದ ದಿನವೇ ಕನ್ನಡ ಪರೀಕ್ಷೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಶಿಕ್ಷಕರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂಲಕ ಇಲಾಖೆಗೆ ಮನವಿ ಸಲ್ಲಿಸಿದ್ದರು.
ಈಗ ಪರೀಕ್ಷೆ ದಿನಾಂಕ ಬದಲಾಯಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಮಾರ್ಚ್ 24 ರಂದು ಬೆಳಿಗ್ಗೆ 11:30 ರಿಂದ 1 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ ಎಂದು ಹೇಳಲಾಗಿದೆ.

