HomeKarnatakaBREAKING: ಎಸ್.ಜಾನಕಿ ಅಂತಿಮ ದರ್ಶನ ಪಡೆದ ಸಂಗೀತ ನಿರ್ದೇಶಕ ಹಂಸಲೇಖ: ಜಾನಕಮ್ಮನ ಸ್ಮಾರಕ ನಿರ್ಮಾಣ ಮಾಡುವಂತೆ...

BREAKING: ಎಸ್.ಜಾನಕಿ ಅಂತಿಮ ದರ್ಶನ ಪಡೆದ ಸಂಗೀತ ನಿರ್ದೇಶಕ ಹಂಸಲೇಖ: ಜಾನಕಮ್ಮನ ಸ್ಮಾರಕ ನಿರ್ಮಾಣ ಮಾಡುವಂತೆ ಸರ್ಕಾರಕ್ಕ ಮನವಿ

ಮೈಸೂರು: ಗಾನಕೋಗಿಲೆ ಎಸ್.ಜಾನಕಿ ಹೃದಯಾಘಾತದಿಂದ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅವರ ಪಾರ್ಥಿವಶರೀರದ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಲಕ್ಷಾಅಂತರ ಅಭಿಮಾನಿಗಳು, ಗಣ್ಯಾತಿ ಗಣ್ಯರು, ಸಂಗೀತ ದಿಗ್ಗಜರು ಆಗಮಿಸಿ ಮಹಾನ್ ಚೇತನದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ನಾದ ಬ್ರಹ್ಮ, ಸಂಗೀತ ನಿರ್ದೇಶಕ ಹಂಸಲೇಖ, ಮಹಾರಾಜಾ ಕಾಲೇಜು ಮೈದಾನಕ್ಕೆ ಆಗಮಿಸಿ ಎಸ್.ಜಾನಕಿ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಸರ್ಕಾರಕ್ಕೆ ಹಾಗೂ ಫಿಲ್ಮ್ ಚೇಂಬರ್ ಅಧ್ಯಕ್ಷೆ ಡಾ.ಜಯಮಾಲಾ ಅವರಿಗೆ ಕರೆ ಮಾಡಿ ಜಾನಕಮ್ಮನವರ ಸ್ಮಾರಕ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಸ್.ಜಾನಕಿ ಅಪಾರ ದೈವ ಭಕ್ತೆ. ಸಂಗೀತಕ್ಕೆ ಒಲಿಯದ ದೇವರೇ ಇಲ್ಲ. ತಮ್ಮ ಸುಮಧುರ ಕಂಠ, ಗಾಯನದ ಮೂಲಕವೇ ದೇವರನ್ನು ಮೆಚ್ಚಿಸಿದ ಮಹಾನ್ ಗಾಯಕಿ ಅವರು. ಕರುನಾಡಿನಲ್ಲಿಯೇ ಇರಬೇಕು ಎಂಬುದು ಎಸ್.ಜಾನಕಿವರ ಆಸೆಯಾಗಿತ್ತು. ಆರು ವರ್ಷಗಳ ಹಿಂದೆ ಅವರು ತಾನು ಕರ್ನಾಟಕದಲ್ಲಿಯೇ ಇರುತ್ತೇನೆ. ಇಲ್ಲಿಯೇ ಇರಬೇಲು ಎಂಬುದು ತನ್ನ ಮಹದಾಸೆ ಎಂದು ಹೇಳಿಕೊಂಡಿದ್ದರು. ಾವರ ಕೊನೆಯಾಸೆಗೆ ಇಂಬುಕೊಡುವ ಕೆಲಸವಾಗಬೇಕು. ಹಾಗಾಗಿ ಗಾನಕೋಗಿಲೆ ಜಾನಕಮ್ಮನವರ ಸ್ಮಾರಕ ನಿರ್ಮಾಣ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಯತೀಂದ್ರ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ತ್ವರಿತವಾಗಿ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular