HomeKarnatakaಮೈಸೂರಿನ ಗದ್ದಿಗೆರೆ ರಸ್ತೆಗೆ ಎಸ್.ಜಾನಕಿ ಅವರ ಹೆಸರಿಡಬೇಕು: ಜಾನಕಮ್ಮನ ಕೇರ್ ಟೇಕರ್ ನವೀನ್ ಮನವಿ

ಮೈಸೂರಿನ ಗದ್ದಿಗೆರೆ ರಸ್ತೆಗೆ ಎಸ್.ಜಾನಕಿ ಅವರ ಹೆಸರಿಡಬೇಕು: ಜಾನಕಮ್ಮನ ಕೇರ್ ಟೇಕರ್ ನವೀನ್ ಮನವಿ

ಮೈಸೂರು: ಗಾನಕೋಗಿಲೆ ಎಸ್.ಜಾನಕಿ ವಿಧಿವಶರಾಗಿದ್ದು, ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಇಂದು ಸಂಜೆ ಸರ್ಕಾರಿ ಗೌರವಗಳೊಖ್ಂದಿಗೆ ಅವರ ಅಂತ್ಯಕ್ರಿಯೆ ನೆರವೇರಲಿದೆ. ಗಾನಕೋಗಿಲೆಯ ಅಗಲಿಕೆ ಕೋಟ್ಯಂತರ ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಎಸ್.ಜಾನಕಿವರು ಕರ್ನಾಟಕದಲ್ಲಿಯೇ ತಾವು ಇರುವುದಾಗಿ ಯಾವಾಗಲೂ ಹೇಳುತ್ತಿದ್ದರು. ಅದರಂತೆ ಅವರು ತಮ್ಮ ಕೊನೇ ದಿನಗಳನ್ನು ಮೈಸೂರಿನಲ್ಲಿಯೇ ಕಳಿದ್ದಾರೆ. ಜಾನಕಮ್ಮನವರ ಮಾತುಗಳ ಬಗ್ಗೆ ಅವರ ಕೇರ್ ಟೇಕರ್ ಆಗಿದ್ದ ನವೀನ್ ಮೆಲುಕು ಹಾಕಿದ್ದು, ಮನದಾಳದ ಮಾತುಗಳನ್ನಾಡಿದ್ದಾರೆ.

ಹೈದರಾಬಾದ್ ನಲ್ಲಿ ಜಾನಕಮ್ಮನವರಿಗೆ ಪ್ಯಾಲೇಸ್ ನಂತಹ ಮನೆ ಇದ್ದರೂ ಅವರೂ ಮೈಸೂರಿನಲ್ಲಿ ಕಾಲಕಳೆಯಲು ಇಚ್ಛಿಸಿದ್ದರು. ನಾನು ಮೈಸೂರಿನಲ್ಲಿಯೇ ಇರುತ್ತೇನೆ. ಬೇರೆಲ್ಲೂ ಹೋಗಲ್ಲ ಎಂದು ಹೇಳುತ್ತಿದ್ದರು ಎಂದು ಭಾವುಕರಾಗಿದ್ದಾರೆ.

ಮಗನ ಸಾವಿನ ಬಳಿಕ ನಾನು ಎಲ್ಲಿಗೂ ಹೋಗುವುದಿಲ್ಲ ಎನ್ನುತ್ತಿದ್ದರು. ನಾನು ನಿಮ್ಮ ಜೊತೆ ಇಲ್ಲಿಯೇ ಇರುತ್ತೇನೆ ಎಂದು ಹೇಳಿದ್ದರು. ಅದರಂತೆ ಅವರು ಮೈಸೂರಿನ ನಮ್ಮ ಮನೆಯಲ್ಲಿಯೇ ಇದ್ದರು. ಕಳೆದ ಎರಡು ವರ್ಷಗಳಿಂದ ಅವರು ನಮ್ಮ ಮನೆಯಲ್ಲಿಯೇ ಇದ್ದರು. ಭಾಗ್ಯ ಎನ್ನುವವರು ಜಾನಕಮ್ಮನವರನ್ನು ನೋಡಿಕೊಳ್ಳುತ್ತಿದ್ದರು. 2018ರಲ್ಲಿ ಮೈಸೂರಿನಲ್ಲಿ ಕಡೇಯ ಕಾರ್ಯಕ್ರಮ ನೀಡಿದ್ದರು. ನನಗಾಗಿ ಈ ಕಾರ್ಯಕ್ರಮ ಮಾಡುತ್ತೇನೆ ಎಂದಿದ್ದರು. ಆನಂತ ಬಂದ ಯಾವುದೇ ಪ್ರಶಸ್ತಿಗಳನ್ನು ಕೂಡ ಅವರು ಸ್ವೀಕರಿಸುತ್ತಿರಲಿಲ್ಲ. ನಾನು 12 ವರ್ಷದವನಾಗಿದ್ದಾಗಿನಿಂದ ಜಾನಕಮ್ಮನವರ ಹುಚ್ಚು ಅಭಿಮಾನಿ. ಅವರು ಎಲ್ಲಿಗೂ ಹೋಗಲ್ಲ ಇಲ್ಲಿಯೇ ಇರುತ್ತಾರೆ ಎಂಬ ನಂಬಿಕೆ ನಮಗಿದೆ. ನಮ್ಮ ಜೊತೆಯಲ್ಲೇ ಅವರು ಇರುತ್ತಾರೆ ಎಂದು ಕಣ್ಣೀರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಾನ್ ಗಾಯಕಿಯಾಗಿರುವ ಎಸ್.ಜಾನಕಿ ಅವರ ಹೆಸರು ಚಿರಸ್ಥಾಯಿ. ಮೈಸೂರು ಎಂದರೆ ಅವರಿಗೆ ಅಪಾರ ಗೌರವ, ಪ್ರೀತಿ. ಅವರ ಮಾತಿನಂತೆ ಕೊನೇ ದಿನಗಳನ್ನು ಅವರು ಮೈಸೂರಿನಲ್ಲಿಯೇ ಕಳೆದಿದ್ದಾರೆ. ಮೈಸೂರಿನ ಗದ್ದಿಗೆರೆ ರಸ್ತೆಗೆ ಎಸ್.ಜಾನಕಿ ಅವರ ಹೆಸರಿಡಬೇಕು. ಈ ಮೂಲಕ ಅವರ ನೆನೆಪು ಸದಾ ಜನಮಾನಸದಲ್ಲಿ ಇರುವಂತೆ ಮಾಡಬೇಕು. ಸರ್ಕಾರ ಈ ನಿಟ್ಟಿನಲ್ಲಿ ಗೌರವಪೂರ್ವಕವಾಗಿ ಕೋರಿಕೆ ನೆರವೇರಿಸಬೇಕು ಎಂದು ನವೀನ್ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular