HomeKarnatakaವಿಧಾನಸಭೆಯಲ್ಲಿ 9ನೇ ಬಾರಿ ಗೆದ್ದ ಏಕೈಕ ಶಾಸಕರಾದ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ

ವಿಧಾನಸಭೆಯಲ್ಲಿ 9ನೇ ಬಾರಿ ಗೆದ್ದ ಏಕೈಕ ಶಾಸಕರಾದ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಹಳಿಯಾಳ ವಿಧಾನಸಭೆ ಕ್ಷೇತ್ರದಿಂದ ಆರ್.ವಿ. ದೇಶಪಾಂಡೆ ಮತ್ತೊಮ್ಮೆ ಜಯಗಳಿಸಿದ್ದು, ಅವರು 9ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದಂತಾಗಿದೆ.

ಹೊಸದಾಗಿ ರಚನೆಯಾಗುವ ವಿಧಾನಸಭೆಯಲ್ಲಿ 9 ಬಾರಿ ಗೆದ್ದ ಏಕೈಕ ಸದಸ್ಯ ಅವರಾಗಲಿದ್ದಾರೆ. 1983 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಆರ್.ವಿ. ದೇಶಪಾಂಡೆ 1985, 1989, 1994, 1999, 2004ರಲ್ಲಿ ಜಯಗಳಿಸಿ 2001ರಲ್ಲಿ ಸೋಲು ಕಂಡಿದ್ದರು. 2013, 2018ರಲ್ಲಿ ಪುನರಾಯ್ಕೆಯಾಗಿದ್ದ ಅವರು ಈಗ ಮತ್ತೊಂದು ಸಲ ಜಯಗಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಧಾನ ಸಭೆಯ ಸೀನಿಯರ್ ಶಾಸಕ ಅವರಾಗಿದ್ದಾರೆ. ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ, ಸಿದ್ದರಾಮಯ್ಯ 8ನೇ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular