HomeKarnatakaRTPS ವಿದ್ಯುತ್ ಘಟಕದಲ್ಲಿ ದುರಂತ; ಕರೆಂಟ್ ಶಾಕ್ ಹೊಡೆದು ಕಾರ್ಮಿಕ ಸಾವು

RTPS ವಿದ್ಯುತ್ ಘಟಕದಲ್ಲಿ ದುರಂತ; ಕರೆಂಟ್ ಶಾಕ್ ಹೊಡೆದು ಕಾರ್ಮಿಕ ಸಾವು

ರಾಯಚೂರು: ಆರ್.ಟಿ.ಪಿ.ಎಸ್ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಕಾರ್ಮಿಕನೊಬ್ಬ ಕರೆಂಟ್ ಶಾಕ್ ಹೊಡೆದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

45 ವರ್ಷದ ನಿಂಗಪ್ಪ ಮೃತ ದುರ್ದೈವಿ. ರಾಯಚೂರಿನ ಶಕ್ತಿನಗರದಲ್ಲಿರುವ ಆರ್.ಟಿ.ಪಿ.ಎಸ್ ವಿದ್ಯುತ್ ಉತ್ಪಾದನಾ ಘಟಕದ ಯುನಿಟ್ 4ರ ಇಎಸ್ ಪಿ ಸಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗಲೇ ಈ ದುರಂತ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲಸ ಮಾಡುತ್ತಿದ್ದಾಗಲೇ ವಿದ್ಯುತ್ ಪ್ರವಹಿಸಿದ್ದು, ಸ್ಥಳದಲೇ ನಿಂಗಪ್ಪ ಸಾವನ್ನಪ್ಪಿದ್ದಾರೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular