HomeIndiaBIG NEWS: ಆಫ್ರಿಕನ್ ಹಂದಿಜ್ವರ ಪತ್ತೆ; ಹಂದಿಗಳನ್ನು ಕೊಲ್ಲಲು ಡಿಸಿ ಆದೇಶ

BIG NEWS: ಆಫ್ರಿಕನ್ ಹಂದಿಜ್ವರ ಪತ್ತೆ; ಹಂದಿಗಳನ್ನು ಕೊಲ್ಲಲು ಡಿಸಿ ಆದೇಶ

ತಿರುವನಂತಪುರಂ: ಕೇರಳದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಕನಿಚಾರ್, ಮಲೆಯಂಪಾಡಿ ಜನರಲ್ಲಿ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಕನಿಚಾರ್ ನ ಮಲೆಯಂಪಾಡಿ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ವರದಿಯಾಗಿದ್ದು, ಇಲ್ಲಿನ ಎರಡು ಫಾರ್ಮ್ ಗಳಲ್ಲಿ ಇರುವ ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಜ್ವರ ಪತ್ತೆಯಾಗಿರುವ ಬಗ್ಗೆ ಪಶುಸಂಗೋಪನಾ ಅಧಿಕಾರಿಗಳು ದೃಢಪಡಿಸಿದ್ದಾರೆ. ಮಲೆಯಂಪಾಡಿಯ 10 ಕಿ.ಮೀ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಕೊಲ್ಲಲು ಆದೇಶ ನೀಡಲಾಗಿದೆ. ಬಳಿಕ ಶಿಷ್ಟಾಚಾರದ ಪ್ರಕಾರ ಹಂದಿಗಳ ಶವಗಳನ್ನು ಹೂಳುವಂತೆ ಸೂಚಿಸಲಾಗಿದೆ.

ಹಂದಿ ಸಾಕಾಣಿಕೆ ಕೇಂದ್ರದ 1 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಸೋಂಕಿತ ಪ್ರದೇಶ ಎಂದು ಘೋಷಿಸಲಾಗಿದೆ. ಅಲ್ಲದೇ 10 ಕೀ.ಮೀ ವ್ಯಾಪ್ತಿಯ ಪ್ರದೇಶವನ್ನು ಕಣ್ಗಾವಲು ವಲಯ ಎಂದು ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಹಂದಿ ಮಾಂಸ ವಿತರಣೆ ಮತ್ತು ಮಾರಾಟವನ್ನು 3 ತಿಂಗಳ ಕಾಲ ನಿಷೇಧಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular