HomeLatest NewsBIG NEWS: ಆರ್.ಎಸ್.ಎಸ್ ನಲ್ಲಿ ಸರ್ಕಾರಿ ನೌಕರರು ಭಾಗಿಯಾಗಲು ಅವಕಾಶವಿದೆ: PDO ಅಮಾನತು ಕಾನೂನುಬಾಹಿರ: ಜಗದೀಶ್...

BIG NEWS: ಆರ್.ಎಸ್.ಎಸ್ ನಲ್ಲಿ ಸರ್ಕಾರಿ ನೌಕರರು ಭಾಗಿಯಾಗಲು ಅವಕಾಶವಿದೆ: PDO ಅಮಾನತು ಕಾನೂನುಬಾಹಿರ: ಜಗದೀಶ್ ಶೆಟ್ಟರ್ ಕಿಡಿ

ಹುಬ್ಬಳ್ಳಿ: ಆರ್.ಎಸ್.ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗಿಯಾಗಲು ಅವಕಾಶವಿದೆ. ಹೀಗಿದ್ದರೂ ಪಿಡಿಒ ಅಧಿಕಾರಿಯನ್ನು ಅಮಾನತು ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಜಗದೀಶ್ ಶೆಟ್ಟರ್, ಆರ್.ಎಸ್.ಎಸ್ ನಲ್ಲಿ ಭಾಗಿಯಾಗಲು ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವೇ ಅವಕಾಶ ನೀಡಿದೆ. ಆರ್.ಎಸ್.ಎಸ್ ನಲ್ಲಿ ಭಾಗವಹಿಸಲು ರೂಲ್ಸ್ ಇದೆ. ಹೀಗಿದ್ದರೂ ಯಾವುದೇ ಕಾನೂನು ಇಲ್ಲದೇ ನಿಯಮಬಾಹಿರವಾಗಿ ಪಿಡಿಒ ಓರ್ವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ. ಸರ್ಕಾರದ ಕ್ರಮ ಸರಿಯಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular