ಬ್ಯಾಡಗಿ ಮಾರುಕಟ್ಟೆಯಲ್ಲಿ ದಾಖಲೆಯ ದರಕ್ಕೆ ಮೆಣಸಿನ ಕಾಯಿ ಮಾರಾಟವಾಗಿದೆ. ಗದಗ ಜಿಲ್ಲೆ ಲಕ್ಕುಂಡಿಯ ರೈತ ಚಂದ್ರು ಚಬ್ಬೇರಬಾವಿ ಅವರು ಬೆಳೆದ ಮೆಣಸಿನಕಾಯಿಗೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಗುರುವಾರ ಕ್ವಿಂಟಾಲ್ ಗೆ 74,099 ರೂ.ಗೆ ಮಾರಾಟವಾಗಿದೆ.
74,099 ರೂಪಾಯಿಯಂತೆ ಮೂರು ಕ್ವಿಂಟಲ್ ಡಬ್ಬಿ ಮೆಣಸಿನಕಾಯಿ ಮಾರಾಟವಾಗಿದ್ದು, ಚಂದ್ರು ಸಂತಸ ವ್ಯಕ್ತಪಡಿಸಿದ್ದಾರೆ. ಇದು ವರ್ಷದಲ್ಲಿ ಅತಿ ಹೆಚ್ಚಿನ ದರವಾಗಿದೆ. ಕಳೆದ ತಿಂಗಳು 54 ರಿಂದ 60 ಸಾವಿರ ರೂಪಾಯಿವರೆಗೆ ದರ ಇತ್ತು.
4 ಎಕರೆಯಲ್ಲಿ ಡಬ್ಬಿ ಮೆಣಸಿನಕಾಯಿ ಬೆಳೆದ ರೈತ ಚಂದ್ರು ಇನ್ನೂ ಮೂರು ಕ್ವಿಂಟಾಲ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ. 10 ಎಕರೆಯಲ್ಲಿ ಕಡ್ಡಿ ಮೆಣಸಿನ ಕಾಯಿ ಬೆಳೆದಿದ್ದು, ಕ್ವಿಂಟಾಲ್ ಗೆ 62,000 ರೂ.ನಂತೆ 4 ಕ್ವಿಂಟಾಲ್ ಮಾರಾಟ ಮಾಡಿದ್ದಾರೆ. ಈಗ ಡಬ್ಬಿ ಮೆಣಸಿನಕಾಯಿಗೆ 74,099 ರೂಪಾಯಿ ದರ ಸಿಕ್ಕಿದ್ದು, 3 ಕ್ವಿಂಟಾಲ್ ಮಾರಾಟ ಮಾಡಿದ್ದಾರೆ.

