ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಘಟಕಗಳ ವ್ಯಾಪ್ತಿಯಲ್ಲಿ ಕರ್ತವ್ಯದ ವೇಳೆ ಮೃತಪಟ್ಟ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕುಟುಂಬದವರಿಗೆ 50 ಲಕ್ಷ ರೂ. ವಿಮಾ ಮೊತ್ತ ವಿತರಣೆ ಪ್ರಕ್ರಿಯೆಗೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.
ಕರ್ತವ್ಯದ ವೇಳೆ ಆಕಸ್ಮಿಕ ಹಾಗೂ ಅಪಘಾತದಲ್ಲಿ ಮೃತ ಸಿಬ್ಬಂದಿಗೆ ಈ ಹಿಂದೆ ನೀಡಲಾಗುತ್ತಿದ್ದ 20 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರ 50 ಲಕ್ಷ ರೂ.ಗೆ ಹೆಚ್ಚಳ ಮಾಡಿದೆ. 2024 ರಿಂದ 2026 ಮಾರ್ಚ್ ಅವಧಿಯಲ್ಲಿ ಮೃತಪಟ್ಟ 20 ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಕುಟುಂಬದವರಿಗೆ ವಿಶೇಷ ಗುಂಪು ಯೋಜನೆ ಅಡಿ ಪರಿಹಾರ ನೀಡಲಾಗುವುದು ಎಂದು ಹೇಳಲಾಗಿದೆ.

