ಮಂಗಳೂರು: ‘ಸೀ ಬ್ರೀಜ್ ಮ್ಯಾರಥಾನ್ ಮಂಗಳೂರು’ ಹೆಸರಲ್ಲಿ ಆನ್ಲೈನ್ ಮೂಲಕ ವಂಚಿಸುವ ಪ್ರಯತ್ನ ನಡೆದಿದ್ದು, ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
5 ಕಿಲೋಮೀಟರ್ ಓಟಕ್ಕೆ 2.5 ಲಕ್ಷ ರೂ., 10 ಕಿಲೋಮೀಟರ್ ಓಟಕ್ಕೆ 3.5 ಲಕ್ಷ ರೂ., 21 ಕಿಲೋಮೀಟರ್ ಓಟಕ್ಕೆ 5 ಲಕ್ಷ ರೂ. ನಗದು ಬಹುಮಾನ ನೀಡುವ ಆಕರ್ಷಣೆಯೊಂದಿಗೆ ನೋಂದಣಿ ಮಾಡಿಕೊಳ್ಳುವಂತೆ ವಿಡಿಯೋ ಹಂಚಿಕೊಳ್ಳಲಾಗಿದೆ. ಇದು ನಕಲಿಯಾಗಿದ್ದು ಯಾರಾದರೂ ನೋಂದಣಿ ಮಾಡಿಕೊಂಡರೆ ಹಣ ಕಳೆದುಕೊಂಡಂತೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಸಿದ್ದಾರೆ.
ಲಕ್ಷಾಂತರ ಬಹುಮಾನ ನೀಡುವ ಆಕ್ಷರ್ಣೆಯೊಂದಿಗೆ ನೋಂದಣಿ ಮಾಡಿಕೊಳ್ಳುವಂತೆ ವಿಡಿಯೋದಲ್ಲಿ ತಿಳಿಸಲಾಗಿದೆ. ಆದರೆ ಅಂತಹ ಯಾವುದೇ ರೀತಿಯ ಮ್ಯಾರಥಾನ್ ಆಯೋಜನೆ ಆಗಿಲ್ಲ. ಹೀಗಾಗಿ ಜಾಲತಾಣದಲ್ಲಿ ನಕಲಿ ಪೋಸ್ಟ್ ಹಾಕಿ ವಂಚನೆಗೆ ಯತ್ನಿಸಿರುವ ಅನುಮಾನ ಇದ್ದು, ಯಾರಾದರೂ ಅದರಲ್ಲಿನ ಮೊಬೈಲ್ ಸಂಖ್ಯೆಗೆ ನೋಂದಣಿ ಮಾಡಿಕೊಂಡರೆ ಮೊಬೈಲ್ ಹ್ಯಾಕ್ ಆಗಿ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.

