HomeIndiaವಿಳಾಸ ಕೇಳಲೂ ಇಲ್ಲಿ ನೀಡಬೇಕು ಹಣ....! ತಲುಪಿಸಿದರೆ ಮತ್ತಷ್ಟು ದುಬಾರಿ

ವಿಳಾಸ ಕೇಳಲೂ ಇಲ್ಲಿ ನೀಡಬೇಕು ಹಣ….! ತಲುಪಿಸಿದರೆ ಮತ್ತಷ್ಟು ದುಬಾರಿ

ಜನರು ಹೊಸ ನಗರಕ್ಕೆ ಆಗಮಿಸಿದಾಗ ವಿಳಾಸ ಕೇಳುವುದು ಸಾಮಾನ್ಯ. ವಿಳಾಸ ಕೇಳುವುದನ್ನೇ ಬಿಜಿನೆಸ್​ ಮಾಡಿಕೊಂಡ ದೇಸಿ ವ್ಯಕ್ತಿಯೊಬ್ಬ ಹಾಕಿರುವ ಪೋಸ್ಟ್​ ಬಾರಿ ವೈರಲ್​ ಆಗಿದ್ದು, ನಕ್ಕು ನಗಿಸುವಂತಿದೆ.

ಪ್ರತಿ ಬಾರಿಯೂ ಬಂದು ವಿಳಾಸ ಕೇಳುತ್ತಿರುವ ಜನರಿಂದ ಬೇಸತ್ತ ವ್ಯಾಪಾರಿಯೊಬ್ಬ ಅದನ್ನು ವ್ಯಾಪಾರದ ಅವಕಾಶವಾಗಿ ಪರಿವರ್ತಿಸಿದ್ದಾನೆ. ಟ್ವಿಟರ್ ಬಳಕೆದಾರರಾದ @priyapalnii, ಹಿಂದಿ ಪೋಸ್ಟರ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪೋಸ್ಟ್​ನಲ್ಲಿ ವಿಳಾಸ ಕೇಳಿದರೆ ರೂ.5 ಆಗುತ್ತದೆ, ವಿಳಾಸಕ್ಕೆ ತಲುಪಿಸಲು ರೂ. 10 ಆಗುತ್ತದೆ ಎಂದು ಬರೆದಿದ್ದಾರೆ. ಇದನ್ನು ನೋಡಿದವರು ಬಿದ್ದೂ ಬಿದ್ದೂ ನಕ್ಕಿದ್ದು, ತಾವು ಇಂಥದ್ದೇ ಬಿಜಿನೆಸ್​ ಶುರು ಹಚ್ಚಿಕೊಳ್ಳುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ವಿಳಾಸಕ್ಕೆ ತಲುಪಿಸಲು 10 ರೂಪಾಯಿ ಕೇಳಿರುವುದು ಬಹಳ ಕಡಿಮೆಯಾಯಿತು. ವಿಳಾಸಕ್ಕೆ ತಲುಪಿಸಿ ಎಂದರೆ ಅದು ಬಹಳ ದೂರವಿದ್ದರೂ ಅವನು ತಲುಪಿಸುತ್ತಾನೆಯೇ ಎಂದು ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular