HomeLatest Newsಆನ್ಲೈನ್ ಗೇಮಿಂಗ್ ನಡೆಸುತ್ತಿದ್ದ ವಿಂಜೋ ಸಂಸ್ಥೆಯ 192 ಕೋಟಿ ರೂ. ಮುಟ್ಟುಗೋಲು

ಆನ್ಲೈನ್ ಗೇಮಿಂಗ್ ನಡೆಸುತ್ತಿದ್ದ ವಿಂಜೋ ಸಂಸ್ಥೆಯ 192 ಕೋಟಿ ರೂ. ಮುಟ್ಟುಗೋಲು

ಬೆಂಗಳೂರು: ಆನ್ಲೈನ್ ಗೇಮಿಂಗ್ ನಡೆಸುತ್ತಿದ್ದ ವಿಂಜೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಚೇರಿ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ ಅಧಿಕಾರಿಗಳು 192 ಕೋಟಿ ಮೌಲ್ಯದ ಅಪರಾಧದ ಆದಾಯವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರು ವಲಯ ಇಡಿ ಅಧಿಕಾರಿಗಳು ವಿಂಜೋ ಸಂಸ್ಥೆಯ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದರು. ಕಂಪನಿಯು ಝೋ ಗೇಮ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಆನ್ಲೈನ್ ರಿಯಲ್ ಮನಿ ಗೇಮಿಂಗ್ ವ್ಯವಹಾರದಲ್ಲಿ ತೊಡಗಿದ್ದು ಈ ಕಂಪನಿಗೆ ಸೇರಿದ ಬ್ಯಾಂಕ್ ಬ್ಯಾಲೆನ್ಸ್ ಎಫ್.ಡಿ.ಆರ್.ಎಸ್., ಮ್ಯೂಚುಯಲ್ ಫಂಡ್ ಗಳ ರೂಪದಲ್ಲಿದ್ದ 192 ಕೋಟಿ ರೂ. ಮೌಲ್ಯದ ಅಪರಾಧದ ಆದಾಯದ ಹಣ ಸ್ಥಗಿತ ಮಾಡಲಾಗಿದೆ.

2025 ರ ನವೆಂಬರ್ 8 ರಂದು ವಿಂಜೋ ಸಂಸ್ಥೆಯ ಕಚೇರಿ ಮತ್ತು ನಿರ್ದೇಶಕರ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ವಶಕ್ಕೆ ಪಡೆದಿದ್ದರು. ಈ ದಾಖಲೆಗಳಿಂದ ವಿಂಜೋ ಕಂಪನಿ ಅಪರಾಧ ಚಟುವಟಿಕೆಗಳು ಮತ್ತು ಅನೈತಿಕ ವ್ಯವಹಾರದಲ್ಲಿ ತೊಡಗಿರುವುದು ಪತ್ತೆಯಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಹಕರು ಎಐ, ಬಿಒಟಿ, ಅಲ್ಗಾರಿದಂಗಳು ಸಾಫ್ಟ್ವೇರ್ ನೊಂದಿಗೆ ಆಟವಾಡುವಂತೆ ಮಾಡಲಾಗಿತ್ತು. ಇದರ ನೈಜತೆ ತಿಳಿಯದ ಗ್ರಾಹಕರು ತಮ್ಮ ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದರು. 2024 ರಿಂದ 2025ರ ಆಗಸ್ಟ್ ಅವಧಿಯಲ್ಲಿ 177 ಕೋಟಿ ರೂ., 2022ರ ಏಪ್ರಿಲ್ ನಿಂದ 2023ರ ಡಿಸೆಂಬರ್ ವರೆಗೆ 557 ಕೋಟಿ ರೂ. ಗಳಿಸಿತ್ತು. ಕೇಂದ್ರ ಸರ್ಕಾರ ಆನ್ ಲೈನ್ ಗೇಮ್ ನಿಷೇಧಿಸಿದ ನಂತರ ಗ್ರಾಹಕರಿಂದ 43 ಕೋಟಿ ರೂ. ಗಳಿಸಿದ್ದು, ಒಟ್ಟು 802 ಕೋಟಿ ರೂ. ಅಪರಾಧದ ಆದಾಯ ಹೊಂದಿರುವುದು ಗೊತ್ತಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular