HomeRecipiesಮಾಡಿ ಸವಿಯಿರಿ ಗರಿ ಗರಿಯಾದ ರವೆ ಚಕ್ಕುಲಿ

ಮಾಡಿ ಸವಿಯಿರಿ ಗರಿ ಗರಿಯಾದ ರವೆ ಚಕ್ಕುಲಿ

ಸಂಜೆ ಟೀ ಸಮಯಕ್ಕೆ ಏನಾದರೂ ಕುರುಕಲು ಇದ್ದರೆ ಚೆನ್ನಾಗಿರುತ್ತದೆ ಅಂದುಕೊಂಡಿದ್ದೀರಾ…? ಹಾಗಾದ್ರೆ ತಡವೇಕೆ ಇಲ್ಲಿದೆ ನೋಡಿ ಸುಲಭವಾಗಿ ಮಾಡಬಹುದಾದ ರೆ ಚಕ್ಕುಲಿ. ಟೀ ಜತೆ ಸಖತ್ ಆಗಿರುತ್ತದೆ.

ಬೇಕಾಗುವ ಸಾಮಾಗ್ರಿಗಳು:

2 ಕಪ್ ನೀರು, 1 ಕಪ್ – ರವೆ, 2 ಟೇಬಲ್ ಸ್ಪೂನ್ – ಬೆಣ್ಣೆ, 2 ಕಪ್ ಅಕ್ಕಿ ಹಿಟ್ಟು, 1 ಟೇಬಲ್ ಸ್ಪೂನ್ – ಬಿಳಿ ಎಳ್ಳು, 1 ಟೀ ಸ್ಪೂನ್ – ಖಾರದಪುಡಿ, ಚಿಟಿಕೆ – ಇಂಗು, 1 ಟೀ ಸ್ಪೂನ್ – ಉಪ್ಪು, ¼ ಕಪ್ – ನೀರು, ಎಣ್ಣೆ – ಕರಿಯಲು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಒಂದು ಅಗಲವಾದ ಪಾತ್ರೆಯಲ್ಲಿ ನೀರು ಕುದಿಯಲು ಇಡಿ. ನೀರು ಕುದಿದ ನಂತರ ಇದಕ್ಕೆ 1 ಕಪ್ ರವೆ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಬೆಣ್ಣೆ ಸೇರಿಸಿ ರವೆ ನೀರನ್ನೆಲ್ಲಾ ಸರಿಯಾಗಿ ಎಳೆದುಕೊಳ್ಳುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ.

ಇದು ಬಾಣಲೆಯ ತಳ ಬಿಡುತ್ತಿದ್ದಂತೆ 2 ಕಪ್ ಅಕ್ಕಿ ಹಿಟ್ಟು, ಎಳ್ಳು, ಖಾರದಪುಡಿ, ಇಂಗು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ¼ ಕಪ್ ನೀರು ಸೇರಿಸಿ ಚಕ್ಕುಲಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ನಂತರ ಚಕ್ಕುಲಿ ಅಚ್ಚಿಗೆ ಹಾಕಿ ಕಾದ ಎಣ್ಣೆಯಲ್ಲಿ ಕರಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular