ಹುಬ್ಬಳ್ಳಿ: ನೈರುತ್ಯ ರೈಲ್ವೆ ರಕ್ಷಣಾ ಪಡೆ( ಆರ್ ಪಿ ಎಫ್) ವಿಶೇಷ ಕಾಅರ್ಯಾಚರಣೆಯಲ್ಲಿ 50 ಮಕ್ಕಳನ್ನು ರಕ್ಷಿಸಿದೆ. ಆರ್ ಪಿ ಎಫ್ ಆಸ್ತಿ ರಕ್ಷಣೆಯೊಂದಿಗೆ ಪ್ರಯಾಣಿಕರ ಸುರಕ್ಷತೆ ಮತ್ತು ಕಲ್ಯಾಣ ಕಾಪಾಡುವಲ್ಲಿಯೂ ತನ್ನ ಕಾರ್ಯ ಮುಂದುವರೆಸಿದೆ. ಪ್ರಯಾಣಿಕರಿಗೆ ಸುರಕ್ಷಿತ ಭದ್ರತೆ ಮತ್ತು ಸುಗಮ ಪ್ರಯಾಣದ ಅನುಭವ ಒದಗಿಸಲು ಆರ್ಪಿಎಫ್ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ನನ್ಹೆ ಫರಿಷ್ಟೆ ಕಾರ್ಯಾಚರಣೆಯಲ್ಲಿ 2026ರ ಫೆಬ್ರವರಿ ತಿಂಗಳಲ್ಲಿ ರೈಲ್ವೆ ರಕ್ಷಣಾ ಪಡೆ ಕಾಣೆಯಾದ 50 ಮಕ್ಕಳನ್ನು (38 ಬಾಲಕರು, 12 ಬಾಲಕಿಯರು) ರಕ್ಷಿಸಿ, ಅಗತ್ಯ ಪರಿಶೀಲನೆಯ ನಂತರ ಅವರ ಕುಟುಂಬಗಳಿಗೆ, ಎನ್‌ಜಿಒ/ಪೊಲೀಸರಿಗೆ ಒಪ್ಪಿಸಲಾಗಿದೆ.
ವಿವಿಧ ಕಾರಣಗಳಿಂದ ತಮ್ಮ ಕುಟುಂಬಗಳಿಂದ ದೂರವಾದ ಈ ಮಕ್ಕಳನ್ನು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಪತ್ತೆಹಚ್ಚಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಆಪರೇಶನ್ ಡಿಗ್ನಿಟಿ ಕಾರ್ಯಾಚರಣೆಯಲ್ಲಿ ಆರೈಕೆ ಅಗತ್ಯವಿದ್ದ ಒಬ್ಬ ಹಿರಿಯ ಮಹಿಳೆಯನ್ನು ರಕ್ಷಿಸಿ, ಪರಿಶೀಲನೆಯ ನಂತರ ಅವರ ಕುಟುಂಬಕ್ಕೆ, ಇಲ್ಲವೇ ಎನ್‌ಜಿಒಗೆ ಒಪ್ಪಿಸಲಾಗಿದೆ.
ಮಹಿಳಾ ಪ್ರಯಾಣಿಕರ ಸುರಕ್ಷತೆ-ಮೇರಿ ಸಹೇಲಿ ಉಪಕ್ರಮದ ಅಡಿ ಒಬ್ಬರೇ ಪ್ರಯಾಣಿಸುವ ಅಥವಾ ಸಹಾಯವಿಲ್ಲದ ಮಹಿಳಾ ಪ್ರಯಾಣಿಕರ ಸುರಕ್ಷಿತ ಪ್ರಯಾಣವನ್ನು ರೈಲ್ವೆ ರಕ್ಷಣಾ ಪಡೆ ಖಚಿತಪಡಿಸಿದೆ. ಅವರ ಸೀಟ್ ಮತ್ತು ಬರ್ತ್ ವಿವರಗಳನ್ನು ಸಂಬಂಧಿತ ನಿಲ್ದಾಣಗಳ ರೈಲ್ವೆ ರಕ್ಷಣಾ ಪಡೆ ತಂಡಗಳಿಗೆ ಹಂಚಿಕೊಂಡು, ಪ್ರಯಾಣದ ಸಮಯದಲ್ಲಿ ನಿಗಾ ಮತ್ತು ಸಹಾಯ ಒದಗಿಸಲಾಗಿದೆ. ಗಮ್ಯಸ್ಥಾನದಲ್ಲಿ ಅವರ ಅಭಿಪ್ರಾಯವನ್ನೂ ಸಂಗ್ರಹಿಸಲಾಗಿದೆ. ಪ್ರಸ್ತುತ 32 ರೈಲುಗಳು ಈ ಯೋಜನೆಯಡಿ ಒಳಗೊಂಡಿವೆ.
ಟಿಕೆಟ್ ದಲ್ಲಾಳಿಗಳ ವಿರುದ್ಧ ಕ್ರಮ–ಉಪಲಬ್ಧ ಕಾರ್ಯಾಚರಣೆಯಲ್ಲಿ ಪ್ರಯಾಣಿಕರಿಗೆ ರೈಲು ಟಿಕೆಟ್‌ಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಹಾಗೂ ಟಿಕೆಟ್ ದಂಧೆ ತಡೆಗಟ್ಟಲು ಕರ್ನಾಟಕ ಮತ್ತು ಗೋವಾ ರಾಜ್ಯಗಳ ವಿವಿಧ ಪ್ರವಾಸ ಏಜೆನ್ಸಿಗಳು ಮತ್ತು ಸ್ಥಳಗಳಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ. ಈ ಕಾರ್ಯಾಚರಣೆಯ ವೇಳೆ ರೈಲ್ವೆ ಕಾಯ್ದೆ ಸೆಕ್ಷನ್ 143 ಅಡಿಯಲ್ಲಿ 23 ಪ್ರಕರಣಗಳಲ್ಲಿ 23 ದಲ್ಲಾಳಿಗಳನ್ನು ಬಂಧಿಸಲಾಗಿದೆ. 77,804 ಮೌಲ್ಯದ 48 ಲೈವ್ ಟಿಕೆಟ್‌ಗಳು ಹಾಗೂ 97,496 ರೂ. ಮೌಲ್ಯದ 65 ಬಳಕೆಯಾದ ಟಿಕೆಟ್‌ಗಳನ್ನು ವಶಪಡಿಸಿಕೊಂಡಿದೆ.

