HomeBusinessಇರಾನ್-ಇಸ್ರೇಲ್ ಯುದ್ಧದ ಬಿಸಿ: ಭಾರತದಲ್ಲಿ ಚಿನ್ನದ ಬೆಲೆ ₹930 ಏರಿಕೆ: ಇಂದಿನ ಲೇಟೆಸ್ಟ್ ದರ ಇಲ್ಲಿದೆ

ಇರಾನ್-ಇಸ್ರೇಲ್ ಯುದ್ಧದ ಬಿಸಿ: ಭಾರತದಲ್ಲಿ ಚಿನ್ನದ ಬೆಲೆ ₹930 ಏರಿಕೆ: ಇಂದಿನ ಲೇಟೆಸ್ಟ್ ದರ ಇಲ್ಲಿದೆ

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ ಮತ್ತು ಮಧ್ಯಪ್ರಾಚ್ಯದ ಯುದ್ಧ ಭೀತಿಯು ಭಾರತದ ಚಿನ್ನದ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಇಂದು (ಮಾರ್ಚ್ 11, 2026) ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡಿದ್ದಾರೆ.ಇಂದು 24 ಕ್ಯಾರೆಟ್ ಚಿನ್ನದ ದರದಲ್ಲಿ ಬರೋಬ್ಬರಿ ₹930 ಏರಿಕೆಯಾಗಿದ್ದು, ಬೆಲೆ ದಾಖಲೆ ಮಟ್ಟಕ್ಕೆ ತಲುಪಿದೆ.

ಬೆಳ್ಳಿ ಬೆಲೆ ?

ಚಿನ್ನದ ಬೆಲೆ ಏರಿಕೆ ಕಂಡಿದ್ದರೂ, ಬೆಳ್ಳಿ ಬೆಲೆಯು ಸದ್ಯಕ್ಕೆ ತಟಸ್ಥವಾಗಿದ್ದು, ಯಾವುದೇ ಭಾರಿ ಏರಿಳಿತ ಕಂಡಿಲ್ಲ. ಆದರೆ ಜಾಗತಿಕ ಪರಿಸ್ಥಿತಿಯಿಂದಾಗಿ ಮುಂದಿನ ದಿನಗಳಲ್ಲಿ ಬೆಳ್ಳಿಯಲ್ಲೂ ಏರಿಳಿತವಾಗುವ ಸಾಧ್ಯತೆಯಿದೆ.ಕೆಜಿ ಬೆಲೆ ಮಂಗಳವಾರ ಇದ್ದ 2,90,000 ರೂ ಬೆಲೆಯೇ ಮುಂದುವರಿದಿದೆ. ದಾಖಲಾಗಿದೆ.

ಬೆಲೆ ಏರಿಕೆಗೆ ಕಾರಣಗಳೇನು?

ಯುದ್ಧದ ಕಾರ್ಮೋಡ: ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದಾಗಿ ಹೂಡಿಕೆದಾರರು ಷೇರು ಮಾರುಕಟ್ಟೆಗಿಂತ ಚಿನ್ನದ ಮೇಲೆ ಹೆಚ್ಚು ನಂಬಿಕೆ ಇಡುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಷೇರು ಮಾರುಕಟ್ಟೆ ಅಸ್ಥಿರತೆ: ಜಾಗತಿಕ ವ್ಯಾಪಾರ ವ್ಯವಸ್ಥೆಯಲ್ಲಿ ಉಂಟಾಗಿರುವ ಅನಿಶ್ಚಿತತೆಯು ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದೆ.

ತೈಲ ಬೆಲೆ ಏರಿಕೆ: ಮಧ್ಯಪ್ರಾಚ್ಯದಲ್ಲಿ ತೈಲ ಪೂರೈಕೆ ವ್ಯತ್ಯಯವಾಗುವ ಭೀತಿಯು ಚಿನ್ನದ ಬೆಲೆಯನ್ನು ಪರೋಕ್ಷವಾಗಿ ಪ್ರೇರೇಪಿಸುತ್ತಿದೆ.

ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪಟ್ಟಿ

1 ಗ್ರಾಂ ಚಿನ್ನದ ಬೆಲೆ:₹16,331

10 ಗ್ರಾಂ ಚಿನ್ನದ ಬೆಲೆ :₹1,63,310

100 ಗ್ರಾಂ ಚಿನ್ನದ ಬೆಲೆ: ₹16,33,100

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ (1 ಗ್ರಾಂ)

ಚೆನ್ನೈ: ₹16,495 (ದೇಶದಲ್ಲೇ ಗರಿಷ್ಠ)

ದೆಹಲಿ: ₹16,346

ಅಹಮದಾಬಾದ್: ₹16,336

ವಡೋದರಾ: ₹16,336

ಬೆಂಗಳೂರು: ₹16,331

ಮುಂಬೈ: ₹16,331

ಕೋಲ್ಕತ್ತಾ: ₹16,331

ಹೈದರಾಬಾದ್: ₹16,331

ಕೇರಳ: ₹16,331

ಪುಣೆ: ₹16,331

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular