HomeKarnatakaರೌಡಿಶೀಟರ್ ಹತ್ಯೆ ಪ್ರಕರಣ: 12 ಆರೋಪಿಗಳು ಅರೆಸ್ಟ್

ರೌಡಿಶೀಟರ್ ಹತ್ಯೆ ಪ್ರಕರಣ: 12 ಆರೋಪಿಗಳು ಅರೆಸ್ಟ್

ಬೆಂಗಳೂರು: ರೌಡಿಶೀಟರ್ ದಿನೇಶ್ ಕೊಲೆ ಮಾಡಿ ಪರಾರಿಯಾಗಿದ್ದ 12 ಆರೋಪಿಗಳನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಮ್ಮನಹಳ್ಳಿಯ ಸರ್ವೀಸ್ ಅಪಾರ್ಟ್ಮೆಂಟ್ ಒಂದರಲ್ಲಿ ರೌಡಿಶೀಟರ್ ದಿನೇಶ್ ನನ್ನು ಹತ್ಯೆ ಮಾಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಅರವಿಂದ, ದಿಲೀಪ್ ಸಾಗರ್, ಅಜಯ್ ಕ್ರಿಷ್ಟೊಫರ್, ನಿಖಿಲ್, ಗೌತಮ್, ಕಾರ್ತಿಕ್, ಸತೀಶ್ ಸೇರಿದಂತೆ 12 ಆರೋಪಿಗಳನ್ನು ಬಂಧಿಸಲಾಗಿದೆ.

ದಿಲೀಪ್ ಸಾಗರ್ ಮತ್ತು ಅಜಯ್, ವಿವಿಧ ಠಾಣೆಗಳ ರೌಡಿಶೀಟರ್ ಗಳಾಗಿದ್ದಾರೆ. ಕೊಲೆಯಾದ ದಿನೇಶ್ ಜೊತೆಗೆ ಆರೋಪಿ ಅರವಿಂದ ಓಡಾಡುತ್ತಿದ್ದ. ರೌಡಿಶೀಟರ್ ಗಳಿಗೆ ಹಫ್ತಾ ನೀಡುವಂತೆ ದಿನೇಶ್ ಬೆದರಿಕೆ ಹಾಕಿದ್ದು, ಪೊಲೀಸರಿಗೆ ದೂರು ನೀಡಿದಲ್ಲಿ ಜೀವ ತೆಗೆಯುವುದಾಗಿ ಬೆದರಿಸಿದ್ದ. ಅರವಿಂದನಿಗೂ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಆತ ದಿಲೀಪ್ ಸಾಗರ್ ಮತ್ತು ಅಜಯ್ ರೊಂದಿಗೆ ಸಂಚು ರೂಪಿಸಿ ದಿನೇಶ್ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular