HomeKarnatakaBIG NEWS: ಜೈಲಿನಿಂದಲೇ ಯುವತಿಗೆ ರೌಡಿ ಶೀಟರ್ ಬ್ಲ್ಯಾಕ್ ಮೇಲ್; ಬೆತ್ತಲೆ ಫೋಟೋ ಕಳುಹಿಸಿ ಹಣಕ್ಕೆ...

BIG NEWS: ಜೈಲಿನಿಂದಲೇ ಯುವತಿಗೆ ರೌಡಿ ಶೀಟರ್ ಬ್ಲ್ಯಾಕ್ ಮೇಲ್; ಬೆತ್ತಲೆ ಫೋಟೋ ಕಳುಹಿಸಿ ಹಣಕ್ಕೆ ಬೇಡಿಕೆ

ಬೆಂಗಳೂರು: ಜೈಲಿನಿಂದ ಯುವತಿಯ ನಗ್ನ ಫೋಟೋ ಕಳುಹಿಸಿ ಹಣ ನೀಡುವಂತೆ ರೌಡಿ ಶೀಟರ್ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ರೌಡಿ ಶೀಟರ್ ಮನೋಜ್ ಯುವತಿಯ ಫೋಟೋ ಇಟ್ಟುಕೊಂಡು ಜೈಲಿನಿಂದಲೇ ಬ್ಲ್ಯಾಕ್ ಮೇಲ್ ಮಾಡಿ ಬೆದರಿಕೆ ಹಾಕುತ್ತಿದ್ದಾನೆ. ಈ ಹಿಂದೆಯೂ ಇದೇ ರೀತಿ ಬೆದರಿಕೆ ಹಾಕಿ ಹಣ ಪಡೆದಿದ್ದಾಗಿ ಯುವತಿಯ ತಾಯಿ ದೂರು ದಾಖಲಿಸಿದ್ದಾರೆ.

ಯುವತಿಯ ತಾಯಿಗೆ ಫೋಟೋ ಕಳುಹಿಸಿ ಆರೋಪಿ ಹಣ ಪಡೆದಿದ್ದಾನೆ. ನಿನ್ನ ಮಗಳ ಬೆತ್ತಲೆ ಫೋಟೋ ನಿನ್ನ ಅಳಿಯನಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಮಗಳ ಬೆತ್ತಲೆ ಫೋಟೋ ಕಳುಹಿಸಿ 40,000 ಹಣ ಪಡೆದಿದ್ದ. ಇದೀಗ ಮತ್ತೆ ಬೆದರಿಕೆ ಹಾಕಲು ಆರಂಭಿಸಿದ್ದು, ಫೆ.9ರಂದು ಮನು ಅಸೋಸಿಯೇಷನ್ ಕಾರ್ತಿಕ್ ನಿಂದ ಕರೆ ಮಾಡಿಸಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಣ ಕೊಡದಿದ್ದರೆ ನಿನ್ನ ಅಳಿಯನಿಗೆ ಫೋಟೋ ಕಳುಹಿಸುತ್ತೇನೆ ಅಂತ ಆವಾಜ್ ಹಾಕಿದ್ದಾನೆ. ಅಲ್ಲದೇ ಫೆ.12ರಂದು ಜೈಲಿನಿಂದಲೇ ಕರೆ ಮಾಡಿ ಧಮ್ಕಿ ಹಾಕಿದ್ದಾನೆ. ವಾಟ್ಸಪ್, ಮೆಸೆಂಜರ್ ಕಾಲ್ ಮಾಡಿ ಮನು ಹಾಗೂ ಕಾರ್ತಿಕ್ ಇಬ್ಬರು ಬೆದರಿಕೆ ಹಾಕುತ್ತಿದ್ದಾರೆ. ಫೋಟೋ ಮಾರ್ಫ್ ಮಾಡಿ ಬೆದರಿಸುತ್ತಿದ್ದಾರೆ ಎಂದು ಯುವತಿ ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಐಟಿ ಆಕ್ಟ್ 67, ಐಪಿಸಿ ಸೆಕ್ಷನ್ 34 ಮತ್ತು 384ರ ಅಡಿ ಪ್ರಕರಣ ದಾಖಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೌಡಿ ಶೀಟರ್ ಮನೋಜ್ ನನ್ನು ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ .

For Latest News Updates, Join Our Whatsapp Community🚩
RELATED ARTICLES

Most Popular