HomeEntertainmentಪ್ರಣಯಂ ಚಿತ್ರದ ರೊಮ್ಯಾಂಟಿಕ್ ಹಾಡು ಬಿಡುಗಡೆ

ಪ್ರಣಯಂ ಚಿತ್ರದ ರೊಮ್ಯಾಂಟಿಕ್ ಹಾಡು ಬಿಡುಗಡೆ

ಎಸ್ ದತ್ತಾತ್ರೇಯ ನಿರ್ದೇಶನದ ‘ಪ್ರಣಯಂ’ ಚಿತ್ರ ಫೆಬ್ರವರಿ 9ರಂದು ರಾಜ್ಯದ್ಯಂತ ತೆರೆ ಮೇಲೆ ಬರಲು ಸಜ್ಜಾಗಿದೆ. ಈ ಸಿನಿಮಾದ ‘ಸಮೀಪ ನೀನು ಬಂದರೆ ಎಂಬ ರೋಮ್ಯಾಂಟಿಕ್ ಗೀತೆ ಇಂದು ಜನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಕುನಲ್ ಗಂಜಾವಾಲಾ ಮತ್ತು ಶ್ರೇಯಾ ಗೋಶಲ್ ಧ್ವನಿಯಾಗಿದ್ದು, ಮನೋಮೂರ್ತಿ ಸಂಗೀತ ಹಾಗೂ ಹೃದಯಶಿವ ಸಾಹಿತ್ಯವಿದೆ.

ರೋಮ್ಯಾಂಟಿಕ್ ಡ್ರಾಮ ಲವ್ ಸ್ಟೋರಿ ಕಥಾಧಾರಿತ ಈ ಚಿತ್ರದಲ್ಲಿ ರಾಜವರ್ಧನ್ ಮತ್ತು ನೈನಾ ಗಂಗೂಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಮಾನ್ಸಿ ವೆಂಜರ್ಸ್ ಬ್ಯಾನರ್ ನಡಿ ಪರಮೇಶ್ ಬಂಡವಾಳ ಹೂಡಿದ್ದಾರೆ. ಕೆ ಗಿರೀಶ್ ಕುಮಾರ್ ಸಂಕಲನ, ನಾಗೇಶ್ ಆಚಾರ್ಯ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ, ಚಿನ್ಮಯಿ ಬಾವಿಕೆರೆ ಮತ್ತು ಹೃದಯಶಿವ ಅವರ ಸಾಹಿತ್ಯವಿದೆ.

For Latest News Updates, Join Our Whatsapp Community🚩
RELATED ARTICLES

Most Popular