HomeEntertainment'ಫಾರ್ ರಿಜಿಸ್ಟ್ರೇಷನ್' ಚಿತ್ರದ ರೋಮ್ಯಾಂಟಿಕ್ ಹಾಡು ರಿಲೀಸ್

‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ರೋಮ್ಯಾಂಟಿಕ್ ಹಾಡು ರಿಲೀಸ್

ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ಅಭಿನಯದ ‘ಫಾರ್ ರಿಜಿಸ್ಟ್ರೇಷನ್’ ಚಿತ್ರದ ರೋಮ್ಯಾಂಟಿಕ್ ವಿಡಿಯೋ ಹಾಡೊಂದನ್ನ ಜನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ”ಕದ್ದು ಕದ್ದು ಕೊಡು” ಎಂಬ ಈ ಹಾಡಿಗೆ ನಕುಲ್ ಅಭ್ಯಂಕರ್ ಧ್ವನಿಗೂಡಿಸಿದ್ದು, ಹರೀಶ್ ಸಂಗೀತ, ನಾಗಾರ್ಜುನ ಶರ್ಮ ಸಾಹಿತ್ಯವಿದೆ.

ನವೀನ್ ದ್ವಾರಕೀಶ್ ನಿರ್ದೇಶನದ ಈ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಹಾಗೂ ಮಿಲನ ನಾಗರಾಜ್ ನಾಯಕ – ನಾಯಕಿಯಾಗಿದ್ದು,  ರವಿಶಂಕರ್, ತಬಲ ನಾಣಿ, ಸುಧಾ ಬೆಳವಾಡಿ, ಬಾಬು ಈರಣ್ಣಯ್ಯ, ರಮೇಶ್ ಭಟ್ ಹಾಗೂ ಸಿಹಿ ಕಹಿ ಚಂದ್ರು ಸೇರಿದಂತೆ ಹಲವರ ತಾರಾ ಬಳಗವಿದೆ. ನಿಶ್ಚಲ್ ಫಿಲಂಸ್  ಬ್ಯಾನರ್ ನಲ್ಲಿ ನವೀನ್ ರಾವ್ ನಿರ್ಮಾಣ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular