HomeKarnatakaಸಿಲಿಂಡರ್ ಸಮಸ್ಯೆ: ಬೆಂಗಳೂರು ಅಂಕಲ್‌ ‘ರಾಕೆಟ್ ಸ್ಟೌವ್’ ವೈರಲ್!

ಸಿಲಿಂಡರ್ ಸಮಸ್ಯೆ: ಬೆಂಗಳೂರು ಅಂಕಲ್‌ ‘ರಾಕೆಟ್ ಸ್ಟೌವ್’ ವೈರಲ್!

ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬೆಂಗಳೂರು ನಗರದಲ್ಲಿ ಹೋಟೆಲ್‌ಗಳು ಬಂದ್ ಆಗುತ್ತಿವೆ. ಅನೇಕ ಹೋಟೆಲ್‌ಗಳು ಕಟ್ಟಿಗೆಯ ಮೂಲಕ ಅಡುಗೆ ಮಾಡುತ್ತಿವೆ. ಆದರೆ ಈಗ ಬೆಂಗಳೂರಿನ ಅಂಕಲ್ ಆವಿಷ್ಕಾರ ಮಾಡಿರುವ ‘ರಾಕೆಟ್ ಸ್ಟೌವ್’ ವೈರಲ್ ಆಗುತ್ತಿದೆ.

ಅಡುಗೆ ಅನಿಲದ ಬಿಕ್ಕಟ್ಟು ಎದುರಾದಾಗ ಹೊಸ ಹೊಸ ಸಂಶೋಧನೆಗಳು ಬೆಳಕಿಗೆ ಬರುತ್ತಿವೆ. ಬೆಂಗಳೂರು ನಗರದಲ್ಲಿ ಹೋಟೆಲ್‌ಗಳು ಮುಚ್ಚುತ್ತಿರುವ ಸಮಯದಲ್ಲಿ, ವ್ಯಕ್ತಿಯೊಬ್ಬರ ಹಿತ್ತಲಿನಲ್ಲಿ ಸಿದ್ಧವಾದ ಪ್ರಾಜೆಕ್ಟ್ ಈಗ ನಗರದಾದ್ಯಂತ ಚರ್ಚೆಯ ವಿಷಯವಾಗಿದೆ.

ಯಾವುದೋ ದೊಡ್ಡ ಪ್ರಯೋಗಾಲಯ, ಭಾರಿ ಬಜೆಟ್ ಇಲ್ಲದೇ ಕಂಡು ಹಿಡಿದ ಸ್ಟೌವ್ ಈಗ ಬೆಂಗಳೂರು ನಗರದಲ್ಲಿ ಚರ್ಚೆಯ ವಿಚಾರ. ಬೆಂಗಳೂರಿನ ವ್ಯಕ್ತಿಯೊಬ್ಬರು ತಯಾರಿಸಿದ ‘ರಾಕೆಟ್ ಸ್ಟೌವ್’ (Rocket Stove) ಈಗ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏನಿದು ರಾಕೆಟ್ ಸ್ಟೌವ್?: ಬೆಂಗಳೂರಿನ ನಿವೃತ್ತ ಒಎನ್‌ಜಿಸಿ ಇಂಜಿನಿಯರ್ ಅಶೋಕ್ ಅರಸ್ ತಯಾರಿಸಿದ ಈ ರಾಕೆಟ್ ಸ್ಟೌವ್ ನಿಜಕ್ಕೂ ಬಹಳ ಉಪಯೋಗಕಾರಿಯಾಗಿದೆ. 6 ವರ್ಷದ ಹಿಂದಿನ ಸಂಶೋಧನೆ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

65 ವರ್ಷದ ಅಶೋಕ್ ಅರಸ್ ಈ ಹಿಂದೆ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದವರು. ಪ್ರಸ್ತುತ ಎಲ್‌ಪಿಜಿ ಕೊರತೆಯ ಸಮಯದಲ್ಲಿ ಅವರ ಈ ರಾಕೆಟ್ ಸ್ಟೌ ಸಂಶೋಧನೆ ಬಹಳ ಮಹತ್ವ ಪಡೆದುಕೊಂಡಿದೆ.

6 ವರ್ಷಗಳ ಹಿಂದೆಯೇ ಗ್ರಾಮೀಣ ಪ್ರದೇಶದ ಜನರಿಗಾಗಿ ಈ ಸ್ಟೌವ್ ತಯಾರಿಸಿದ್ದರು. ಇಂದು ಅದು ನಗರದ ಹೋಟೆಲ್ ಮಾಲೀಕರಿಗೂ ಸಂಜೀವಿನಿಯಾಗಿದೆ.

ರಾಕೆಟ್ ಸ್ಟೌವ್‌ನ ವೈಶಿಷ್ಟ್ಯಗಳು

  • ಒಂದು ಸ್ಟೌ ಬೆಲೆ ಸುಮಾರು ರೂ. 3,000
  • ಇದು ಅತಿ ಕಡಿಮೆ ಕಟ್ಟಿಗೆಯಲ್ಲಿ ಹೆಚ್ಚಿನ ಶಾಖ ನೀಡುತ್ತದೆ.
  • ಒಣ ಎಲೆಗಳು, ತೆಂಗಿನ ಚಿಪ್ಪು, ಸಣ್ಣ ಕಡ್ಡಿಗಳು ಅಥವಾ ಕೃಷಿ ತ್ಯಾಜ್ಯ ಸಹ ಬಳಸಬಹುದು.
  • ಇದು ‘L’ ಆಕಾರದ ಕಂಬಶನ್ ಚೇಂಬರ್ (combustion chamber) ಹೊಂದಿದ್ದು, ಗಾಳಿಯ ಸಂಚಾರವನ್ನು ಉತ್ತಮಗೊಳಿಸಿ ಬೆಂಕಿಯ ತೀವ್ರತೆ ಹೆಚ್ಚಿಸುತ್ತದೆ.
  • ಕಟ್ಟಿಗೆ ಸಂಪೂರ್ಣವಾಗಿ ಉರಿಯುವುದರಿಂದ ಹೊಗೆ ಬಹಳ ಕಡಿಮೆ ಇರುತ್ತದೆ. ಇದು ಕಣ್ಣು ಮತ್ತು ಶ್ವಾಸಕೋಶದ ಆರೋಗ್ಯಕ್ಕೆ ಉತ್ತಮ.
  • ಅಶೋಕ್ ಅವರು ಈ ಸ್ಟೌವ್ ಅನ್ನು ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (IISc) ಯ ‘ಓಪನ್ ಡೇ’ ನಂತಹ ಕಾರ್ಯಕ್ರಮಗಳಲ್ಲಿಯೂ ಪ್ರದರ್ಶಿಸಿದ್ದಾರೆ.

ಕೇವಲ ಸಣ್ಣ ಕಡ್ಡಿಗಳು ಅಥವಾ ತೆಂಗಿನ ಚಿಪ್ಪುಗಳನ್ನು ಬಳಸಿ ಅತಿ ಹೆಚ್ಚು ಶಾಖವನ್ನು ಉತ್ಪಾದಿಸುತ್ತದೆ ಈ ಸ್ಟೌವ್. ಈಗ ಇದನ್ನು ಖರೀದಿಸಲು ಜನರು ಆಸಕ್ತಿ ತೋರಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಸಹ ಸ್ಟೌವ್ ಲಭ್ಯವಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular