HomeLatest News20 ಲಕ್ಷ ರೂಪಾಯಿ ದರೋಡೆ ಪ್ರಕರಣ: ಸಿಐಡಿ ಇನ್ಸ್ ಪೆಕ್ಟರ್ ನ್ಯಾಯಾಂಗ ಬಂಧನಕ್ಕೆ

20 ಲಕ್ಷ ರೂಪಾಯಿ ದರೋಡೆ ಪ್ರಕರಣ: ಸಿಐಡಿ ಇನ್ಸ್ ಪೆಕ್ಟರ್ ನ್ಯಾಯಾಂಗ ಬಂಧನಕ್ಕೆ

ಬೆಂಗಳೂರು: ಉದ್ಯಮಿಯೊಬ್ಬರು ತಂಗಿದ್ದ ಹೋಟೆಲ್ ರೂಂ ಗೆ ನುಗ್ಗಿ 20 ಲಕ್ಷ ರೂಪಾಯಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದ ಪ್ರಕರಣದಲ್ಲಿ ಸಿಐಡಿ ಇನ್ಸ್ ಪೆಕ್ಟರ್ ಮಹೇಶ್ ಕನಕಗಿರಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕೇರಳ ಮೂಲದ ಉದ್ಯಮಿಯೊಬ್ಬರಿಂದ 20 ಲಕ್ಷ ರೂಪಾಯಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇನ್ಸ್​​ಪೆಕ್ಟರ್​​​ ಮಹೇಶ್ ಕನಕಗಿರಿ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ಸ್​​ಪೆಕ್ಟರ್​​​ ಮಹೇಶ್ ಕನಕಗಿರಿ ಸೇರಿದಂತೆ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕುಪೇಂದ್ರ ರೆಡ್ಡಿ ಮತ್ತು ವಸಂತ್ ಕುಮಾರ್ ಬಂಧಿತ ಇತರ ಆರೋಪಿಗಳಾಗಿದ್ದು, ಅವರನ್ನು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಪ್ರಕರಣ ಸಂಬಂಧ ಮಡಿವಾಳ ಪೊಲೀಸರ ತನಿಖೆ ವೇಳೆ ನನಗೇನು ಗೊತ್ತಿಲ್ಲ. ಕುಪೇಂದ್ರ ರೆಡ್ಡಿ ಪರಿಚಯ. ಹೀಗಾಗಿ ಜೊತೇಲಿ ಹೋಗಿದ್ದೇ ಅಷ್ಟೇ ಎಂದು ಇನ್ಸ್​​ಪೆಕ್ಟರ್​​​ ಮಹೇಶ್ ಕನಕಗಿರಿ ಹೇಳಿದ್ದಾರಂತೆ. ರಾಬರಿ ವಿಚಾರ ತನಗೆ ಗೊತ್ತೇ ಇಲ್ಲ. ನೀವು ಬಂದು ಹೇಳಿದಾಗಲೇ ಆ ಬಗ್ಗೆ ತನಗೆ ಗೊತ್ತಾಗಿದೆ ಎಂದು ಮಹೇಶ್ ತಿಳಿಸಿದ್ದಾರೆ. ಐಡಿ ಕಾರ್ಡ್ ಬಗ್ಗೆ ಕೇಳಿದ್ರೆ ವಾಹನದ ಡ್ಯಾಶ್ ಬೋರ್ಡ್​​ನಲ್ಲಿ ಅದನ್ನು ಇಟ್ಟಿದ್ದೆ. ನನ್ನ ಗಮನಕ್ಕೆ ಬಾರದೆ ಅದನ್ನು ತೆಗೆದುಕೊಂಡು ಮಿಸ್ ಯೂಸ್ ಮಾಡಲಾಗಿದೆ. ಐಡಿ ಮಿಸ್ ಯೂಸ್ ಮಾಡಿದ್ದಾರೆ ಎಂಬ ಬಗ್ಗೆ ಬೇಕಿದ್ದರೆ ನಾನು ದೂರು ಕೊಡ್ತೀನಿ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಉಳಿದ ಆರೋಪಿಗಳು ಮಾತ್ರ ವಿಚಾರಣೆ ವೇಳೆ ಇನ್ಸ್​​ಪೆಕ್ಟರ್ ಮಹೇಶ್ ಕನಕಗಿರಿಯೇ ದರೋಡೆ ಮಾಸ್ಟರ್ ಮೈಂಡ್ ಎಂದಿದ್ದಾರೆ. ಅವರಿಗೆ ಎಲ್ಲ ಗೊತ್ತು. ಅವರು ಹೇಳಿದಂತೆ ಮಾಡಿದ್ದೇವೆ ಎನ್ನುತ್ತಿದ್ದಾರೆ. ಹೀಗಾಗಿ ಸದ್ಯ ಮಹೇಶ್ ಕನಕಗಿರಿ ವಿಚಾರಣೆಯೇ ಚಾಲೆಂಜ್ ಆಗಿದ್ದು, ಅವರ ಮೊಬೈಲ್ ಸೀಜ್ ಮಾಡಿ ಖಾಕಿ ತನಿಖೆಗೆ ಮುಂದಾಗಿದೆ.

ಮಹೇಶ್ ಕನಕಗಿರಿ ಕುಪೇಂದ್ರ ರೆಡ್ಡಿ ಜೊತೆ ನಿರಂತರ ಸಂಪರ್ಕದಲ್ಲಿ ಇರೋದು ಬಯಲಾಗಿದೆ ಎನ್ನಲಾಗಿದೆ. ಉಳಿದಂತೆ ಹೋಟೆಲ್ ಸಿಸಿಟಿವಿ ಸೇರಿದಂತೆ ಹಲವು ತಾಂತ್ರಿಕ ಸಾಕ್ಷಗಳ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದು, ಮಹೇಶ್ ಕನಕಗಿರಿ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲು ಡಿಸಿಪಿ ಸುಜಿತಾಗೆ ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular