HomeLatest Newsಹೆದ್ದಾರಿಯಲ್ಲಿ ದರೋಡೆಗೆ ಸ್ಕೆಚ್: ಗರುಡಾ ಗ್ಯಾಂಗ್ ನ ಮೂವರು ಆರೋಪಿಗಳು ಅರೆಸ್ಟ್

ಹೆದ್ದಾರಿಯಲ್ಲಿ ದರೋಡೆಗೆ ಸ್ಕೆಚ್: ಗರುಡಾ ಗ್ಯಾಂಗ್ ನ ಮೂವರು ಆರೋಪಿಗಳು ಅರೆಸ್ಟ್

ಕಾರವಾರ: ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಗೆ ಸಂಚು ರೂಪಿಸಿದ್ದ ಗರುಡಾ ಗ್ಯಾಂಗ್ ನ ಮೂವರು ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಚೊಕ್ಕಬೆಟ್ಟು ನಿವಾಸಿ ಜಲೀಲ್ ಹುಸೈನ್, ಭಟ್ಕಳದ ಗಾಂಧಿನಗರದ ಡ್ರೈವರ್ ನಾಸೀರ್ ಹಕೀಮ್ ಹಾಗೂ ಓರ್ವ ಬಾಲಾಪರಾಧಿ ಬಂಧಿತರು. ಜಲೀಲ್ ವಿರುದ್ಧ 11 ಪ್ರಕರಣಗಳು ಇವೆ. ನಾಸೀರ್ ವಿರುದ್ಧ ಎರಡು ಕೇಸ್ ಗಳು ಇವೆ. ಬಂಧಿತರಿಂದ ಚಾಕು, ಖಾರದ ಪುಡಿ ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಇನ್ನುಳಿದ ಇಬ್ಬರು ಆರೋಪಿಗಳು ಪೊಲಿಸರನ್ನು ಕಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ. ತಪ್ಪಿಸಿಕೊಂಡಿರುವ ಇಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular