HomeAutoಕದ್ದ ಬೈಕ್ ನಲ್ಲಿ ಹೋಗ್ತಿದ್ದವನ ಮೇಲೆ ನಾಯಿಗಳ ದಾಳಿ; ಪೊಲೀಸರ ಮೇಲೆಯೇ ಕೇಸ್ ಹಾಕಿದ ಭೂಪ....!

ಕದ್ದ ಬೈಕ್ ನಲ್ಲಿ ಹೋಗ್ತಿದ್ದವನ ಮೇಲೆ ನಾಯಿಗಳ ದಾಳಿ; ಪೊಲೀಸರ ಮೇಲೆಯೇ ಕೇಸ್ ಹಾಕಿದ ಭೂಪ….!

ಕದ್ದ ಬೈಕ್ ನಲ್ಲಿ ವೇಗವಾಗಿ ಚಲಿಸುತ್ತಿದ್ದ ವೇಳೆ ವ್ಯಕ್ತಿಯ ಮೇಲೆ ಪೊಲೀಸ್ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ ನಂತರ ಆತ ಪೊಲೀಸರ ಮೇಲೆ ಕೇಸ್ ದಾಖಲಿಸಿದ್ದಾನೆ. ಇಂಗ್ಲೆಂಡ್‌ನಲ್ಲಿ ನಡೆದಿರುವ ಈ ಘಟನೆ ಅಚ್ಚರಿ ಮೂಡಿಸಿದೆ.

ʼದಿ ಟೆಲಿಗ್ರಾಫ್ʼ ಪ್ರಕಾರ ಕಳೆದ ತಿಂಗಳು ಘಟನೆ ನಡೆದಾಗ 24 ವರ್ಷದ ಸೋನಿ ಸ್ಟೋ ಬೈಕ್ ಕದ್ದು ಸ್ಥಳದಿಂದ ಪರಾರಿಯಾಗುತ್ತಿದ್ದ. ಈಸ್ಟ್ ಯಾರ್ಕ್‌ಷೈರ್‌ನ ಹಲ್‌ನಲ್ಲಿರುವ ಕಾರ್ ಪಾರ್ಕ್‌ನಿಂದ ಮೋಟಾರ್‌ ಸೈಕಲ್ ಕದ್ದು ಹೋಗ್ತಿದ್ದ. ಈ ವೇಳೆ ಪೊಲೀಸರು ಬೆನ್ನಟ್ಟಿದ್ದಾರೆ.

ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದಾಗ ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನ ಡಿಕ್ಕಿ ಹೊಡೆದಿತ್ತು. ಈ ವೇಳೆ ಆತನ ಎಡಗಾಲು ಮುರಿದಿದೆ. ಇದೇ ವೇಳೆ ಎರಡು ಪೋಲೀಸ್ ನಾಯಿಗಳು ಸೋನಿ ಸ್ಟೋ ನನ್ನು ಹಿಂಬಾಲಿಸಿ ಕಚ್ಚಿ ಗಾಯಗೊಳಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದಾಗಿ ಸೋನಿ ಸ್ಟೋ ಹಲ್‌ನಲ್ಲಿರುವ ಕ್ರೌನ್ ಕೋರ್ಟ್‌ ನಲ್ಲಿ ಕೇಸ್ ದಾಖಲಿಸಿದ್ದಾನೆ. ಅಹಿತಕರ ದರೋಡೆ ಯತ್ನದ ವೇಳೆ ತನ್ನ ಕಕ್ಷಿದಾರರು ತೀವ್ರ ಗಾಯ ಅನುಭವಿಸಿದ್ದು ಅನೇಕ ಹೊಲಿಗೆ ಹಾಕಿಸಿಕೊಳ್ಳುವಂತಾಯಿತು. ಇದು ಯೋಜಿತ ಘಟನೆಯಲ್ಲ ಎಂದು ಸ್ಟೋ ಪರ ವಕೀಲರು ಹೇಳಿದ್ದಾರೆ.

ಅದಾಗ್ಯೂ ನ್ಯಾಯಾಲಯವು ಸ್ಟೋಗೆ ನಾಲ್ಕೂವರೆ ವರ್ಷಗಳ ಶಿಕ್ಷೆ ವಿಧಿಸಿತು ಮತ್ತು ಮೂರು ವರ್ಷ ಮತ್ತು ಮೂರು ತಿಂಗಳವರೆಗೆ ವಾಹನ ಚಲಾಯಿಸದಂತೆ ನಿಷೇಧಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular